ಬೇಸಿಗೆ ಬಿಸಿ ತಣಿಸಲು ನೀವು ತೆಗೆದುಕೊಳ್ಳಬೇಕಾದ ಹಣ್ಣು ಮತ್ತು ಪಾನೀಯಗಳು
ಕಲ್ಲಂಗಡಿ ಹಣ್ಣು, ಜ್ಯೂಸ್ ಹೆಚ್ಚು ಬಳಸುವುದರಿಂದ ದಣಿವು ನೀಗುತ್ತದೆ. ಇದು ಶೇ 90ರಷ್ಟು ನೀರಿನಾಂಶ ಹೊಂದಿದೆ, ದೇಹಕ್ಕೆ ನೀರಿನಾಂಶ ನೀಡುತ್ತದೆ. ಉತ್ಸಾಹ, ಶಕ್ತಿ ತುಂಬುವ ಜೊತೆಗೆ ಬಾಯಾರಿಕೆ ನಿವಾರಿಸಿ, ಹೆಚ್ಚು ಬೆವರು ಹೊರಹೋಗಲು ಸಹಕಾರಿ.
ಕಲ್ಲಂಗಡಿ
ಎಳನೀರು ಉತ್ತಮ ಪಾನೀಯ. ಬಾಯಾರಿಕೆಗೆ ಉಪಶಮನ ಮಾತ್ರವಲ್ಲ, ಇದು ಉಷ್ಣತೆ, ರಕ್ತಸಂಚನ ಸಮತೋಲನದಲ್ಲಿಡುತ್ತದೆ. ದೇಹಕ್ಕೆ ಅವಶ್ಯ ಕಬ್ಬಿಣಾಂಶ ಹಾಗೂ ಪೌಷ್ಟಿಕಾಂಶ ಒದಗಿಸುತ್ತದೆ.
ಎಳನೀರು
ಪುದೀನಾ
ಪುದೀನಾವನ್ನು ಮೊಸರು, ಮಜ್ಜಿಗೆ ಅಥವಾ ರಾಯಿತಾದೊಂದಿಗೆ ಬೆರೆಸಿ ತಿನ್ನಬಹುದು. ಚಟ್ನಿ ಮಾಡುವ ಮೂಲಕ ನೀವು ಇದನ್ನು ಆಹಾರದ ಜೊತೆ ಸೇವಿಸಬಹುದು. ದೇಹದ ಉಷ್ಣತೆ ತಂಪಾಗಿರಿಸುವ ಜೊತೆ ತಾಜಾತನ ನೀಡುತ್ತದೆ.
ನಿಂಬೆ ಹಣ್ಣಿನ ಜ್ಯೂಸ್
ನಿಂಬೆ ಜ್ಯೂಸ್ ಬೇಸಿಗೆಯಲ್ಲಿ ಅತ್ಯುತ್ತಮ ಪಾನೀಯ. 1 ಲೋಟ ಪಾನೀಯ ದೇಹಕ್ಕೆ ಹಲವು ವಿಧದಲ್ಲಿ ಪ್ರಯೋಜನಕಾರಿ. ರುಚಿಗಾಗಿ ಪಾನಕಕ್ಕೆ ಉಪ್ಪು, ಚಿಟಿಕೆ ಜೀರಿಗೆ ಪುಡಿ ಸೇರಿಸಿ. ಪಾನಕವು ದಿನವಿಡೀ ತಂಪಾಗಿಡುತ್ತದೆ.
ಈರುಳ್ಳಿ
ಈರುಳ್ಳಿ ದೇಹ ತಂಪಾಗಿಸುವ ಗುಣ ಹೊಂದಿದೆ. ಇದಕ್ಕೆ ನಿಂಬೆ-ಉಪ್ಪು ಸೇರಿಸಿ ಸಲಾಡ್ ಮಾಡಿ ತಿನ್ನಬಹುದು ಅಥವಾ ಜ್ಯೂಸ್ ಮಾಡಿ ಕುಡಿಯಬಹುದು. ಕೆಂಪು ಈರುಳ್ಳಿ ಕ್ವೆರ್ಸೆಟಿನ್ ಅನ್ನು ಹೊಂದಿದ್ದು, ಇದನ್ನು ತಿನ್ನುವುದರಿಂದ ಸೂರ್ಯನ ಶಾಖದ ಹೊಡೆತವನ್ನು ತಪ್ಪಿಸಬಹುದು.
ಬೇಸಿಗೆಯಲ್ಲಿ ಜನರ ಬಾಯಲ್ಲಿ ನೀರೂರಿಸುವ ಮತ್ತೊಂದು ಹಣ್ಣು ಕರ್ಬುಜಾ. ಇದು ದೇಹ ತಂಪಾಸಿಗಿಸುವ ಜೊತೆ ಆರೋಗ್ಯಕಾರಿ. ಕಡಿಮೆ ಕ್ಯಾಲರಿ, ಜೀರ್ಣಾಂಗ ಕ್ರಿಯೆಗೆ ಇದು ಸಹಾಯಕ, ರಕ್ತದೊತ್ತಡ ನಿವಾರಿಸುತ್ತದೆ.
ಕರ್ಬುಜಾ ಹಣ್ಣು
ಮೊಸರು
ಮೊಸರು ರುಚಿಕರ ಮಾತ್ರವಲ್ಲ, ದೇಹ ತಂಪಾಗಿಸುತ್ತದೆ. ಮೊಸರನ್ನು ಮಜ್ಜಿಗೆ ಅಥವಾ ಸಿಹಿ ಲಸ್ಸಿ ಮಾಡಿ ಕುಡಿಯಬಹುದು. ರಾಯಿತಾಗೂ ಬೆರೆಸಬಹುದು, ಹಣ್ಣುಗಳ ಜೊತೆ ಬೆರೆಸಿ ಸೇವಿಸಬಹುದು.
ಸೌತೆಕಾಯಿ
ಸೌತೆಕಾಯಿ ಸಾಕಷ್ಟು ನಾರು ಹಾಗೂ ನೀರಿನಾಂಶ ಹೊಂದಿದೆ. ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದ ಮಲಬದ್ಧತೆ ದೂರವಾಗುತ್ತದೆ. ಹೆಚ್ಚಿನ ನೀರಿನ ಅಂಶ ನಿರ್ಜಲೀಕರಣ ಹೋಗಲಾಡಿಸುತ್ತದೆ.