Tap to Read ➤

ಸೈಕ್ಲೋನ್ ಭೀತಿಯಲ್ಲಿ ಒಡಿಶಾ: ಮುನ್ನೆಚ್ಚರಿಕೆ

ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ ಸರ್ಕಾರ
ಒಡಿಶಾ ಸರ್ಕಾರವು, ಬಂಗಾಳಕೊಲ್ಲಿಯಿಂದ ಸೈಕ್ಲೋನ್ ಬರುವ ಸಾಧ್ಯತೆಗಳಿವೆ ಎಂದು ಮುನ್ಸೂಚನೆ ನೀಡಿದೆ.
ಈ ಕುರಿತು ಎಲ್ಲ ರೀತಿಯ ಪೂರ್ವ ಸಿದ್ದತೆ ಮಾಡಿಕೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸೂಚನೆ.
ಭಾರತೀಯ ಹವಾಮಾನ ಇಲಾಖೆಯು ಒಡಿಶಾದಲ್ಲಿ ಮೇ 8 ರ ಸುಮಾರಿಗೆ 75km/phr ವೇಗದಲ್ಲಿ ಬೀಸಲಿದೆ ಎಂಬ ಮಾಹಿತಿ ನೀಡಿದೆ.
ಮುಂದಿನ 48 ಗಂಟೆಗಳಲ್ಲಿ ಚಂಡಮಾರುತವು ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆ ಇದೆ.
ಈಗ 40-50km /phr ವೇಗದಲ್ಲಿ ಗಾಳಿ ಬೀಸುತ್ತಿದ್ದು, ಮೇ 8 ರಂದು 75km/phr ಕ್ಕೆ ಏರಲಿದೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಉಮಾಶಂಕರ ದಾಸ್ ಹೇಳಿದ್ದಾರೆ.
ಸೈಕ್ಲೋನ್ ಹಿನ್ನಲೆಯಲ್ಲಿ ಮೀನುಗಾರರಿಗೆ ಸಮುದ್ರದಲ್ಲಿ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ
ಒತ್ತಡ ಕಡಿಮೆಯಾದ ನಂತರ ಚಂಡಮಾರುತ ಯಾವ ದಿಕ್ಕಿನಲ್ಲಿ ಸಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ವೆಬ್ ಸ್ಟೋರಿಗಳಿಗಾಗಿ