Tap to Read ➤

ವಂದೇ ಭಾರತ್ ಎಕ್ಸ್‌ಪ್ರೆಸ್: ಚೆನ್ನೈ-ಮೈಸೂರು ಮಾರ್ಗದ ಸಮಯ, ದರ

ಐದನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದ್ದು, ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಚಲಿಸುತ್ತಿದೆ
Mahesh Malnad
ಚೆನ್ನೈ-ಬೆಂಗಳೂರು-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಚೆನ್ನೈ ಸೆಂಟ್ರಲ್, ಬೆಂಗಳೂರು ಸಿಟಿ ಮತ್ತು ಮೈಸೂರು ಜಂಕ್ಷನ್ ಈ ಮಾರ್ಗವನ್ನು ಒಳಗೊಂಡಿದೆ
ಚೆನ್ನೈ-ಬೆಂಗಳೂರು-ಮೈಸೂರು ನಿಲ್ದಾಣಗಳ ನಡುವೆ ಇದು ಪೆರಂಬೂರ್, ವೆಪ್ಪಂಪಟ್ಟು, ಕಟ್ಪಾಡಿ ಜಂಕ್ಷನ್, ಗುಡುಪಲ್ಲಿ ಮತ್ತು ಮಾಲೂರು ಬರಲಿದೆ
ಚೆನ್ನೈ ಸೆಂಟ್ರಲ್‌ನಿಂದ ಮೈಸೂರು ಜಂಕ್ಷನ್‌ಗೆ ತೆರಳಲಿರುವ ರೈಲಿನ ಸಂಖ್ಯೆ 20608. ಮೈಸೂರು ಜಂಕ್ಷನ್‌ನಿಂದ ಚೆನ್ನೈ ಸೆಂಟ್ರಲ್‌ಗೆ ತಲುಪಲಿರುವ ರೈಲು ಸಂಖ್ಯೆ 20607.
ರೈಲಿನ ಸಂಖ್ಯೆ
ವಂದೇ ಭಾರತ್ ಎಕ್ಸ್‌ಪ್ರೆಸ್ ವಾರದಲ್ಲಿ ಆರು ದಿನಗಳು ಚಲಿಸುತ್ತದೆ.- ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ.
ವಾರದಲ್ಲಿ ಆರು ದಿನಗಳು
ಚೆನ್ನೈ ಸೆಂಟ್ರಲ್‌ನಿಂದ ಬೆಳಗ್ಗೆ 05:50 ಕ್ಕೆ ತನ್ನ ಪ್ರಯಾಣವನ್ನು ಪ್ರಾರಂಭಿಸಿ ಬೆಳಗ್ಗೆ 10:25 ಕ್ಕೆ ಬೆಂಗಳೂರು ಸಿಟಿ ಜಂಕ್ಷನ್‌ಗೆ ತಲುಪುತ್ತದೆ. ಬಳಿಕ 10:30 ಕ್ಕೆ ಹೊರಡಲಿದೆ.
137.6 ಕಿಮೀ ದೂರವನ್ನು ಕ್ರಮಿಸುವ ಮೂಲಕ ಮೈಸೂರು ಜಂಕ್ಷನ್‌ಗೆ ಮಧ್ಯಾಹ್ನ 12:30 ಕ್ಕೆ ತಲುಪುತ್ತದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ -ರೈಲು ಜಂಕ್ಷನ್‌ನಲ್ಲಿ 5 ನಿಮಿಷಗಳ ಕಾಲ ನಿಲ್ಲುತ್ತದೆ. ಒಟ್ಟಾರೆ, 479 ಕಿ.ಮೀ ಕ್ರಮಿಸಲು 6 ಗಂಟೆ 25 ನಿಮಿಷ ತೆಗೆದುಕೊಳ್ಳುತ್ತಿದೆ
ವಂದೇ ಭಾರತ್ ಎಕ್ಸ್‌ಪ್ರೆಸ್ ಮೈಸೂರು ಜಂಕ್ಷನ್‌ನಿಂದ ಮಧ್ಯಾಹ್ನ 1:05 ಕ್ಕೆ ಹೊರಡಲಿದ್ದು, ಮಧ್ಯಾಹ್ನ 2:55 ಕ್ಕೆ ಬೆಂಗಳೂರು ಸಿಟಿ ಜಂಕ್ಷನ್‌ಗೆ ತಲುಪಲಿದೆ
5 ನಿಮಿಷಗಳ ನಿಲುಗಡೆ ನಂತರ, ಬೆಂಗಳೂರು ಸಿಟಿ ಜಂಕ್ಷನ್‌ನಿಂದ ಮಧ್ಯಾಹ್ನ 3:00 ಗಂಟೆಗೆ ಹೊರಡಲಿದೆ. ರಾತ್ರಿ 7:35 ಕ್ಕೆ ಚೆನ್ನೈ ಸೆಂಟ್ರಲ್ ತಲುಪಲಿದೆ
ಸ್ವಯಂಚಾಲಿತ ಬಾಗಿಲು, ಜಿಪಿಎಸ್‌ ಆಧಾರಿತ ಆಡಿಯೋ- ದೃಶ್ಯ, ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಆನ್-ಬೋರ್ಡ್ ಹಾಟ್‌ಸ್ಪಾಟ್ ವೈಫೈ, ಅತ್ಯಂತ ಆರಾಮದಾಯಕ ಆಸನ ಹಾಗೂ ಎಕ್ಸಿಕ್ಯೂಟಿವ್‌ ಕ್ಲಾಸ್‌ನಲ್ಲಿ ತಿರುಗುವ ಕುರ್ಚಿಗಳನ್ನು ಹೊಂದಿದೆ
ವಂದೇ ಭಾರತ್ ಕೋಚ್‌
ಚೆನ್ನೈ-ಮೈಸೂರು ದರ
ಎಕಾನಮಿ ಕ್ಲಾಸ್ ಅಥವಾ ಎ/ಸಿ ಚೇರ್ ಕಾರಿನಲ್ಲಿ ಪ್ರಯಾಣಕ್ಕೆ ಮೂಲ ದರ 1200 ರೂ ಆಗಿರುತ್ತದೆ. ಎಕ್ಸಿಕ್ಯುಟಿವ್ ಕ್ಲಾಸ್‌ನಲ್ಲಿ ಪ್ರಯಾಣಕ್ಕೆ 2,295ರೂಪಾಯಿ ಆಗುತ್ತದೆ
ಮೈಸೂರು-ಚೆನ್ನೈ ದರ
ಎಕಾನಮಿ ಕ್ಲಾಸ್ ಅಥವಾ ಎ/ಸಿ ಚೇರ್ ಕಾರಿನಲ್ಲಿ ಪ್ರಯಾಣಿಸುವವರಿಗೆ ಮೂಲ ದರ 1365 ರೂ ಆಗಿರುತ್ತದೆ. ಎಕ್ಸಿಕ್ಯುಟಿವ್ ಕ್ಲಾಸ್‌ನಲ್ಲಿ ಪ್ರಯಾಣಿಸುವವರಿಗೆ 2,485ರೂಪಾಯಿ ಆಗುತ್ತದೆ.
ಮೈಸೂರು ಮತ್ತು ಬೆಂಗಳೂರು ನಡುವೆ
ಮೈಸೂರು ಮತ್ತು ಬೆಂಗಳೂರು ನಡುವೆ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸಲು 368 ರೂಪಾಯಿ ಆಗುತ್ತದೆ. ಅದೇ ರೀತಿ ಎಕ್ಸಿಕ್ಯುಟಿವ್ ಕ್ಲಾಸ್‌ನಲ್ಲಿ ಪ್ರಯಾಣಿಸುವವರಿಗೆ 768 ರೂಪಾಯಿ ಆಗುತ್ತದೆ
ಹೆಚ್ಚಿನ ಮಾಹಿತಿಗೆ