Tap to Read ➤

ಸುಡು ಬೇಸಿಗೆ; ಆರೋಗ್ಯ ವರ್ಧಕ ಪಾನೀಯ ಸೇವಿಸಿ

ಬೇಸಿಗೆ ರಣ ಬಿಸಿಲು ಸುಡುತ್ತಿದೆ, ದಾಹ ಹೆಚ್ಚುತ್ತಿದೆ, ಬಾಯಾರಿಕೆ ತಣಿಸಲು ಏನಾದರು ತಂಪು ಪಾನೀಯ ಕುಡಿಯಬೇಕೆನಿಸುತ್ತದೆ.
ಬೇಸಿಗೆ ಬಿಸಿಲು
ಬೇಸಿಗೆಯಲ್ಲಿ ಬಾಯಾರಿಕೆ ಹೆಚ್ಚು, ತಂಪು ಪಾನೀಯ ಕುಡಿಯಬೇಕು ಎಂದು ಅನ್ನಿಸುತ್ತದೆ. ಹಾಗೆಂದು ತಂಪು ಪಾನೀಯ ಸೇವಿಸುವ ಮುನ್ನ ಅವು ನಮ್ಮ ಆರೋಗ್ಯಕ್ಕೆ ಒಳಿತಾ ಎಂದು ಗಮನಿಸಿ
ಬೇಸಿಗೆಯಲ್ಲಿ ಪಾನೀಯ ಸೇವಿಸುವಾಗ ಕೆಲವು ಮುಂಜಾಗ್ರತೆ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಕೆಲವು ಪಾನೀಯ ಬಾಯಿಗೆ ರುಚಿಯಾಗಿ, ದೇಹಕ್ಕೆ ತಂಪನ್ನು ನೀಡಿದರೂ ಆರೋಗ್ಯ ಕಾಪಾಡಲಾರವು.
ಎಷ್ಟು ನೀರನ್ನು ಕುಡಿದರೂ ಬಾಯಾರಿಕೆ ತೀರುವುದೇ ಇಲ್ಲ. ನಮ್ಮ ದೇಹದಲ್ಲಿ ನೀರಿನಾಂಶ ಹೆಚ್ಚಿನ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ.
ಕಲ್ಲಂಗಡಿ, ಕರ್ಬೂಜ, ಜೀರಿಗೆ, ನಿಂಬೆ, ಮೂಸಂಬಿ, ಪುನರ್ಪುಳಿ ಹೀಗೆ ವಿವಿಧ ಹಣ್ಣಿನ ರಸದ ಪಾನೀಯಗಳನ್ನೇ ಸೇವಿಸಬೇಕು. ಕೃತಕ ಪಾನೀಯಗಳಿಂದ ದೂರ ಉಳಿಯುವುದು ಉತ್ತಮ.
ಆರೋಗ್ಯ ಕಾಪಾಡಿಕೊಳ್ಳಲು ಎಳನೀರನ್ನು ಸೇವಿಸುವುದು ಉತ್ತಮ. ಬಿಸಿಲಲ್ಲಿ ಓಡಾಡಿ ಬಂದವರು ನಿಂಬೆ ರಸವನ್ನು ಸೇವಿಸಿದರೆ ವಿಟಮಿನ್ ’ಸಿ’ ಅಂಶ ಇರುವುದರಿಂದ ಡಿಹೈಡ್ರೇಷನ್ ಸಮಸ್ಯೆ ಉಂಟಾಗುವುದಿಲ್ಲ.
ಜ್ಯೂಸ್ ಸೇವನೆ
ಬೇಸಿಗೆ ದಿನದಲ್ಲಿ ಆರೋಗ್ಯದ ದೃಷ್ಟಿಯಿಂದ ಹಿತವಾಗುವ ನೈಸರ್ಗಿಕ ಪಾನೀಯ ಎಳನೀರಾಗಿದ್ದು, ಎಲ್ಲ ಸಂದರ್ಭಗಳಲ್ಲಿಯೂ ನಮ್ಮ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದ ಉಷ್ಣಾಂಶವನ್ನು ತಂಪುಗೊಳಿಸುವಲ್ಲಿ ಎಳನೀರಿನ ಪಾತ್ರ ಬಹಳಷ್ಟಿದೆ.
ಹಣ್ಣು ಸೇವಿಸಿ
ಎಳನೀರು, ಹಣ್ಣಿನ ಜ್ಯುಸ್‌ಗಳು ಅಧಿಕ ವಿಟಮಿನ್ ಹಾಗೂ ಖನಿಜವನ್ನು ಒಳಗೊಂಡಿದೆ. ಇದರ ಸೇವನೆ ದೇಹಕ್ಕೆ ಆರೋಗ್ಯ ನೀಡುವುದಲ್ಲದೇ, ಫಿಟ್ನೆಸ್‌ಗೂ ಇದು ಉಪಯೋಗಕರವಾಗಿದೆ.
ಇನ್ನಷ್ಟು ವಿವರ