By : Oneindia Kannada Video Team
Published : December 07, 2017, 05:18

ಪ್ರಪಂಚದಾದ್ಯಂತ ಅತಿ ಹೆಚ್ಚು ಸಾಕಲ್ಪಡುವ ಶ್ವಾನಗಳು

ಸಾವಿರಾರು ವರ್ಷಗಳಿಂದಲೂ ಆಯ್ದ ತಳಿಗಳ ಶ್ವಾನಗಳನ್ನು ಸಾಕಲಾಗುತ್ತಿದ್ದು, ಕೆಲವು ಬಾರಿ ಅದೇ ತಳಿಯ ಜೊತೆ ವಂಶಾಭಿವೃದ್ಧಿ ಮಾಡಿಸಿದರೆ ಮತ್ತೆ ಕೆಲವು ಬಾರಿ ಮಿಶ್ರ ಶ್ವಾನ ತಳಿಗಳ ಜೊತೆ ವಂಶಾಭಿವೃದ್ಧಿ ಮಾಡಿಸಲಾಗುತ್ತಿತ್ತು. ಈ ಪ್ರಕ್ರಿಯೆಯು ಈಗಲೂ ಮುಂದುವರೆದಿದ್ದು, ಹಲವು ವೈವಿಧ್ಯ ತಳಿಗಳು, ಮಿಶ್ರ ತಳಿಗಳು ಹಾಗೂ ವಿವಿಧ ಶ್ವಾನ ತಳಿಗಳ ಹುಟ್ಟಿಗೆ ಕಾರಣವಾಗಿದೆ. ಪಗ್ ಇಂದ ಗ್ರೇಟ್‌ ಡೆನ್‌ವರೆಗೆ ಹಲವು ರೂಪಗಳಲ್ಲಿ ಕಾಣಿಸಿಕೊಳ್ಳುವ ಏಕಮಾತ್ರ ಪ್ರಾಣಿಯೆಂದರೆ ಶ್ವಾನಗಳು ಮಾತ್ರ. ಶ್ವಾನಗಳ ಡಿ ಎನ್ ಎ ಯು ಮಾನವನಿಗಿಂತ ಎರಡು ಪಟ್ಟು ಹೆಚ್ಚಿನ ವರ್ಣತಂತುಗಳನ್ನು ಹೊಂದಿರುವುದರಿಂದಾಗಿ, ಅವುಗಳ ಮೈಕಟ್ಟು ಮತ್ತು ರೂಪಗಳಲ್ಲಿ ವೈವಿಧ್ಯತೆ ಕಾಣಲು ಸಾಧ್ಯವಾಗಿದೆ. ಇಂತಹ ನೀಯತ್ತಾದ ಪ್ರಾಣಿಗಳಲ್ಲಿ ಪ್ರಪಂಚದಾದ್ಯಂತ ಅತಿ ಹೆಚ್ಚು ಸಾಕಲ್ಪಡುವ ಜಾತಿಯ ಶ್ವಾನಗಳು ಈ ವಿಡಿಯೋದಲ್ಲಿ ನಿಮಗೆ ತೋರಿಸಿದ್ದೇವೆ .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!