By : Oneindia Kannada Video Team
Published : November 27, 2017, 04:05

ಪ್ರಪಂಚದ ಮೊದಲ ರೋಬೋಟ್ ರಾಜಕಾರಣಿ

ನ್ಯೂ ಜಿಲಂಡ್ ನಲ್ಲಿ ೨೦೨೦ ರ ಜನರಲ್ ಎಲೆಕ್ಷನ್ಸ್ ನಲ್ಲಿ ಸ್ಯಾಮ್ ನಿಲ್ಲಬೇಕು ಅಂತ ಬಯಸುತ್ತಿದ್ದಾನೆ . ಅಷ್ಟಕ್ಕೂ ಯಾರು ಈ ಸ್ಯಾಮ್ ಅಂದ್ರೆ . ಸ್ಯಾಮ್ ಒಂದು ರೋಬೋಟ್ . ನಿಕ್ ಗೆರ್ರಿಸ್ಟನ್ ಅನ್ನೋ ಒಬ್ಬ ವಿಜ್ಞಾನಿ ಸ್ಯಾಮ್ ಎಂಬ ರೋಬೋಟ್ ನನ್ನ ಕಂಡು ಹಿಡಿದಿದ್ದಾರೆ . ಈ ಸ್ಯಾಮ್ ಜನಗಳ ಕಷ್ಟಕ್ಕೆ ಸ್ಪಂದಿಸ್ತಾನೆ . ಅವರ ಪ್ರಶ್ನೆಗೆ ಉತ್ತರಿಸುತ್ತಾನೆ . ಹಾಗೆ ಜನರ ಜೊತೆ ಮಾತಾಡುತ್ತ ಹೊಸ ವಿಷಯಗಳನ್ನು ಕಲೀತಾನೆ . ಆದ್ರೆ ಈಗಿರೋ ಕಾನೂನಿನ ಪ್ರಕಾರ ರೊಬೊಟ್ಗಳು ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ . ಆದರೆ ಇನ್ನು ೨೦೨೦ ಬರಲು ಬಹಳ ಕಾಲ ಇದೆ ಹಾಗು ಅಷ್ಟರಲ್ಲಿ ಏನಾಗಬಹುದೆಂದು ಯಾರಿಗೂ ಗೊತ್ತಿಲ್ಲ . ಆದ್ರೆ ಸದ್ಯಕ್ಕೆ ಈ ಸ್ಯಾಮ್ ಇಡೀ ಪ್ರಪಂಚ ಅವನ ಕಡೆ ತಿರುಗಿ ನೋಡುವಂತೆ ಮಾಡಿದ್ದಾನೆ .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!