By : Oneindia Kannada Video Team
Published : November 18, 2017, 06:21

ನವೆಂಬರ್ 19, 2017 ಪ್ರಪಂಚ ಪ್ರಳಯ ಸುಂದರ ಕ್ಷಣಗಳನ್ನ ಕ್ಲಿಕ್ಕಿಸಲು ರೆಡಿಯಾಗಿ

ಪ್ರಳಯದ ಸುಂದರ ಚಿತ್ರಗಳನ್ನು ಕ್ಲಿಕ್ಕಿಸಲು ಎಲ್ಲರೂ ಸಜ್ಜಾಗಿ! ನಾಳೆ ಏನಾಗುತ್ತದೆ ಎಂಬ ಚಿಂತೆ ಯಾರಿಗೂ ಇಲ್ಲ. ಅಲ್ಲ, ಚಿಂತೆ ಇರಬೇಕಾಗಿರುವುದಾದರೂ ಏತಕ್ಕೆ? ನಿನ್ನೆ ನಿನ್ನೆಗೆ, ನಾಳೆ ನಾಳೆಗೆ, ಇಂದು ನಮ್ಮಗೆ ಚಿಂತೆ ಏತಕೆ? ಶನಿವಾರದ ಇರುಳು ಕಳೆದು ಬೆಳಕಾಗಲೇಬೇಕು, ಭಾನುವಾರ ಭಾಸ್ಕರ ತನ್ನ ಚಿನ್ನದ ಹೊದಿಕೆಯನ್ನು ಭೂಮಿಯ ಮೇಲೆ ಹಾಸಲೇಬೇಕು. ನಾಳೆಯ ಚಿಂತೆಯಿಲ್ಲದೆ, ಎಲ್ಲರೂ ತಮ್ತಮ್ಮ ವ್ಯಾಪಾರದಲ್ಲಿ ಮುಳುಗಿಹೋಗಿದ್ದಾರೆ. ವೈದ್ಯರು ಸ್ಟೆತೆಸ್ಕೋಪ್ ಹೆಗಲಿಗೆ ಹಾಕಿಕೊಂಡು ಬಡವರು, ಮಧ್ಯಮ ವರ್ಗದವರು, ಶ್ರೀಮಂತರ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ರಾಜಕಾರಣಿಗಳು ಯಾತ್ರೆ ಮುಂದುವರಿಸಿದ್ದಾರೆ, ಮುಂದಿನ ವರ್ಷ ಮತ್ತೆ ಸರಕಾರ ರಚಿಸುವ ಕನಸು ಕಾಣುತ್ತಿದ್ದಾರೆ.ಇನ್ನು ನಮ್ಮನಿಮ್ಮಂಥ ಶ್ರೀಸಾಮಾನ್ಯರು ವಾಟ್ಸಾಪಿನಲ್ಲಿ ಏನು ಬಂದಿದೆ, ಫೇಸ್ ಬುಕ್ಕಿನಲ್ಲಿ ಬಿಳಿ ಗಡ್ಡದವನೊಬ್ಬ 'ಯಾರಾದ್ರೂ ಇನ್ನೂ ಎದ್ದಿದ್ದೀರಾ?' ಎಂದು ನಟ್ಟನಡುರಾತ್ರಿ ಹಾಕಿದ, ಕೆಲಸಕ್ಕೆ ಬಾರದ, ಕಿತ್ತುಹೋಗಿರುವ ಸ್ಟೇಟಸ್ಸಿಗೆ ಎಷ್ಟು ಲೈಕುಗಳು ಬಂದಿವೆ ಎಂದು ಎಣಿಕೆ ಮಾಡುತ್ತಿರುತ್ತಾರೆ, ತಮ್ಮದೂ ಒಂದು ಲೈಕ್ ಒತ್ತಿರುತ್ತಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!