By: Oneindia Kannada Video Team
Published : December 18, 2017, 07:33

ಈ ವಾರದ ಮಹಿಳಾ ಸಾಧಕಿ : ಆರತಿ ಹಿರೇಮಠ್, ಧಾರವಾಡ

Subscribe to Oneindia Kannada

ಸೂಕ್ಷ ಎಳೆಯ, ಚೆಂದ ಚೆಂದದ ಚಿತ್ತಾರದ ಕಸೂತಿ ಕಲೆಯನ್ನು ಬಟ್ಟೆಗಳ ಮೇಲೆ ನೋಡಿದರೆ ಅರಿವಿಲ್ಲದೆ 'ವ್ಹಾವ್' ಎಂಬ ಉದ್ಗಾರವೊಂದು ಹೊರಡುತ್ತದೆ. ನಮ್ಮ ಕಣ್ಣಿಗೆ ಹಬ್ಬ ಉಂಟಾಮಾಡುವ ಆ ಚೆಂದದ ಚಿತ್ತಾರವೇ ಹಲವರಿಗೆ ಬದುಕಿನ ಅನ್ನ ಕೊಡುತ್ತದೆ! ಹಲವರನ್ನು ಸ್ವಾವಲಂಬನೆಯ ದಿಕ್ಕಿನತ್ತ ಯಶಸ್ವಿಯಾಗಿ ಕೊಂಡೊಯ್ಯುತ್ತದೆ.ಇದೇ ಕಸೂತಿ ಕಲೆಯ ಮೂಲಕ ನೂರಾರು ಮಹಿಳೆಯರಿಗೆ ಸ್ವಾವಲಂಬನೆಯ ಹಾದಿ ತೋರಿಸಿಕೊಟ್ಟ ಧಾರವಾಡದ ಆರತಿ ಹಿರೇಮಠ್ ಅವರು ನಮ್ಮ ಈ ವಾರದ ಸಾಧಕಿ. 1990 ರಿಂದ ಕಸೂತಿಯನ್ನು ಕೇವಲ ಕಲೆಯನ್ನಾಗಿ ಮಾತ್ರವಲ್ಲದೆ, ನೂರಾರು ಬಡ ಮಹಿಳೆಯರ ಆದಾಯದ ಮೂಲವನ್ನಾಗಿ ಬದಲಿಸಿದ ಕೀರ್ತಿ ಆರತಿ ಅವರಿಗೆ ಸೇರುತ್ತದೆ.ಮಹಿಳಾ ಸ್ವಾವಲಂಬನೆಯ ಜೊತೆಯಲ್ಲೇ ಕರ್ನಾಟಕದ ಸಾಂಸ್ಕೃತಿಕ ಕಸೂತಿ ಕಲೆಯನ್ನೂ ಬೆಳೆಸುವ ಉದ್ದೇಶವನ್ನೂ ಹೊಂದಿರುವ ಅವರು ತಮ್ಮ ಕಸೂತಿ ಕಲೆಯಿಂದಾಗಿ ಹಲವರು ಬದುಕು ಕಂಡುಕೊಂಡ ಬಗೆಯನ್ನು ಒನ್ ಇಂಡಿಯಾದೊಂದಿಗೆ ಹಂಚಿಕೊಂಡಿದ್ದು ಹೀಗೆ..

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!