By: Oneindia Kannada Video Team
Published : December 09, 2017, 06:24

ಈ ವಾರದ ಮಹಿಳಾ ಸಾಧಕಿ : ಎನ್ ಪ್ರಭಾ, ಅಂಕಿತಾ ಪ್ರಕಾಶನ

Subscribe to Oneindia Kannada

"ನಾವು ಕನ್ನಡ ಉಳಿಸಬೇಕಿದೆ, ಓದುವ ಸಂಸ್ಕೃತಿ ಉಳಿಸಬೇಕಿದೆ, ಓದುವ ಹವ್ಯಾಸ ಹೆಚ್ಚಿಸಬೇಕಿದೆ. ಈ ಮಾತುಗಳೆಲ್ಲ ಬರೀ ಹೇಳಿಕೆ ಆಗಬಾರದು. ಎಲ್ಲರೂ ಪ್ರಯತ್ನ ಮಾಡದಿದ್ದರೆ ನಾವು ಬಹಳ ಕಳೆದುಕೊಳ್ತೀವಿ" ಎಂದು ಒಂದು ಕ್ಷಣ ಮೌನವಾದರು ಎನ್.ಪ್ರಭಾ. ಅಂಕಿತಾ ಪ್ರಕಾಶನ ಹಾಗೂ ಪುಸ್ತಕ ಮಳಿಗೆಯ ಮಾಲೀಕರಾದ ಪ್ರಕಾಶ್ ಕಂಬತ್ತಳ್ಳಿ ಅವರ ಪತ್ನಿ ಪ್ರಭಾ.ಬೆಂಗಳೂರಿನ ಗಾಂಧೀಬಜಾರಿಗೆ ಅಲ್ಲಿನ ಹೂವು, ವಿದ್ಯಾರ್ಥಿ ಭವನ, ಗ್ರಂಥಿಗೆ ಅಂಗಡಿ ಹೇಗೆ ಒಂದು ಸೌಂದರ್ಯ- ಗುರುತನ್ನು ತಂದುಕೊಟ್ಟಿದೆಯೋ ಅದೇ ರೀತಿ ಅಂಕಿತ ಪುಸ್ತಕ ಮಳಿಗೆ ಕೂಡ ಹೆಗ್ಗುರುತು. ಅಂಥ ಅಂಕಿತ ಪುಸ್ತಕ ಮಳಿಗೆಯಲ್ಲಿ ಹತ್ತೊಂಬತ್ತು ವರ್ಷಗಳ ಕಾಲ ತಪಸ್ಸಿನಂತೆ ಕಳೆದವರು ಪ್ರಭಾ.ಮಳಿಗೆಯಲ್ಲಿನ ಕೆಲಸಕ್ಕೆ ಜವಾಬ್ದಾರಿ ಮುಗಿಯಿತು ಅಂತಲ್ಲ. ಆ ನಂತರ ಮನೆಯಲ್ಲಿ ಅಂಕಿತ ಪ್ರಕಾಶನದ ಕೆಲಸ ಶುರುವಾಗುತ್ತದೆ. ಪ್ರೂಫ್ ರೀಡಿಂಗ್, ಕಾಪಿ ಎಡಿಟಿಂಗ್, ಕವರ್ ಪೇಜ್...ಹೀಗೆ ಪ್ರಕಾಶನ ಹಾಗೂ ಮಾರಾಟದಲ್ಲಿ ಬಹು ಪಾತ್ರಗಳನ್ನು ನಿರ್ವಹಿಸುತ್ತಿರುವ ಪ್ರಭಾ ಅವರು ನಮ್ಮ ಈ ವಾರದ ಸಾಧಕಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!