By: Oneindia Kannada Video Team
Published : January 13, 2018, 11:54

ದೇಶದ ಎರಡನೇ ಕ್ಯಾಪಿಟಲ್ ಆಗುತ್ತಾ ಬೆಂಗಳೂರು?

Subscribe to Oneindia Kannada

ಬೆಂಗಳೂರು ಜಗತ್ತಿನ ಐಟಿ ವಲಯದ ಚುಂಬಕ ನಗರಿ. ಹೀಗಾಗಿ ಈ ಸಿಟಿಯನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಘೋಷಿಸಬೇಕೆಂಬ ಕೂಗು ಈಗ ಪ್ರಧಾನಿ ನರೇಂದ್ರ ಮೋದಿಯವರ ಅಂಗಳ ತಲುಪಿದೆ. ಕರ್ನಾಟಕ ಬೃಹತ್ ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ ಬೆಂಗಳೂರು ದೇಶದ ಎರಡನೇ ರಾಜಧಾನಿಯನ್ನಾಗಿ ಮಾಡಿ ಎಂದು ಒತ್ತಾಯಿಸಿ ಸುದೀರ್ಘ ಪತ್ರ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರದಲ್ಲಿ, ದೇಶಕ್ಕೆ ಎರಡನೇ ರಾಜಧಾನಿಯ ಅಗತ್ಯದ ಬಗ್ಗೆ ಆರ್‌.ವಿ. ದೇಶಪಾಂಡೆ ಪ್ರಸ್ತಾಪ ಮಾಡಿದ್ದಾರೆ. ದೇಶದ ದಕ್ಷಿಣ ಭಾಗದಲ್ಲಿರುವ ನಗರ, ನೈಸರ್ಗಿಕ ಪ್ರಕೋಪ ಮತ್ತು ಪ್ರತಿಕೂಲ ಹವಾಮಾನಗಳಿಂದ ಮುಕ್ತವಾಗಿದೆ. ವೃತ್ತಿಪರರಿಂದ ಕೂಡಿದ ವಿಭಿನ್ನ ಜನಸಮುದಾಯ ಮತ್ತು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ವಿಸ್ತೃತ ಕೈಗಾರಿಕೆಗಳನ್ನು ಒಳಗೊಂಡ ಬೆಂಗಳೂರು ನಗರ ಎಲ್ಲಾ ವಿಧದಲ್ಲೂ ದೇಶದ ಎರಡನೇ ರಾಜಧಾನಿಯಾಗಲು ಅರ್ಹ ನಗರ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!