By : Oneindia Kannada Video Team
Published : December 24, 2017, 03:03

ಬಿ ಎಸ್ ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿಯಾಗ್ತಾರಾ? ಜ್ಯೋತಿಷಿ ಹೀಗ್ ಹೇಳ್ತಾರೆ

ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಭವಿಷ್ಯದ ಬಗೆಗಿನ ಲೇಖನವಿದು. ಮಹಾನ್ ನಾಯಕರಾದ ಅವರ ವಿಚಾರದಲ್ಲಿ ಭಾವೋದ್ವೇಗಕ್ಕೆ ಒಳಗಾಗುವ ಅಭಿಮಾನಿಗಳೇ ಹೆಚ್ಚು. ಆದರೆ ಗ್ರಹಗತಿಗಳು ಎಲ್ಲರನ್ನೂ ಒಂದೇ ರೀತಿ ನೋಡುತ್ತವೆ. ಅವರ ಜನ್ಮ ಜಾತಕ ಹಾಗೂ ಗ್ರಹಗಳ ಸ್ಥಿತಿಯ ಆಧಾರದಲ್ಲಿ ಏನನ್ನು ಸೂಚಿಸುತ್ತಿದೆಯೋ ಆ ಅಂಶಗಳನ್ನೇ ಇಲ್ಲಿ ಕೊಡಲಾಗಿದೆ. ಫಲಾಫಲದ ಪರಾಮರ್ಶೆಯಷ್ಟೇ ನಾವು ಮಾಡಲು ಸಾಧ್ಯ. ಉಳಿದದ್ದು ಆ ಭಗವಂತನಿಗೆ ಬಿಟ್ಟ ವಿಚಾರ. ವೃಶ್ಚಿಕ ರಾಶಿಯವರಾದ ಯಡಿಯೂರಪ್ಪನವರ ಜನ್ಮ ಜಾತಕ ನೋಡುವಾಗ ವೃಷಭದಲ್ಲಿ ಶನಿ ಗ್ರಹವಿದೆ.ಇನ್ನು ಧನು ಲಗ್ನದವರಾದ ಅವರಿಗೆ ಎರಡನೇ ಸ್ಥಾನದಲ್ಲಿ ಕುಜ ಹಾಗೂ ಬುಧ ಗ್ರಹವಿದೆ. ಸದ್ಯಕ್ಕೆ ಧನು ರಾಶಿಯಲ್ಲಿ ಶನಿಯು ಸ್ಥಿತನಾಗಿದ್ದು, ಜನ್ಮ ಕಾಲದಲ್ಲಿ ವೃಷಭ ರಾಶಿಯಲ್ಲಿದ್ದ ಶನಿಯಿಂದ ಲೆಕ್ಕ ಹಾಕಿದರೆ ಈಗ ಎಂಟನೆ ಸ್ಥಾನದಲ್ಲಿದೆ. ಆದ್ದರಿಂದ ಯಾವ ರೀತಿಯಲ್ಲೂ ಅನುಕೂಲಕರವಾದ ಅಥವಾ ಶುಭವಾದ ಫಲಗಳನ್ನು ಹೇಳುವುದು ಕಷ್ಟವಾಗುತ್ತದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!