By : Oneindia Video Kannada Team
Published : November 29, 2018, 01:45
Duration : 02:15
02:15
ಅಂಬಿ ಅಂತಿಮಯಾತ್ರೆಯಲ್ಲಿ ದಚ್ಚುಕಿಚ್ಚನ ಮೇಲಿದ್ದ ಆಸೆ ನುಚ್ಚುನೂರಾಯ್ತು.!
ರೆಬೆಲ್ ಸ್ಟಾರ್ ಅಂಬರೀಶ್ ಅವರ ನಿಧನ ಇಡೀ ಚಿತ್ರರಂಗವನ್ನೇ ಅನಾಥರನ್ನಾಗಿಸಿದೆ. ತಮ್ಮಲ್ಲಿದ್ದ ಪ್ರತಿಷ್ಠೆ, ಸ್ವಾಭಿಮಾನ, ಕೋಪ, ತಾಪ ಎಲ್ಲವನ್ನ ಮರೆತು ಅಂಬಿಯ ಅಂತಿಮ ದರ್ಶನದಲ್ಲಿ ಭಾಗಿಯಾದರು ಕಲಾಕುಟುಂಬ. ಶಿವರಾಜ್ ಕುಮಾರ್, ರವಿಚಂದ್ರನ್, ಅರ್ಜುನ್ ಸರ್ಜಾ, ಪುನೀತ್, ಗಣೇಶ್, ಯಶ್, ದರ್ಶನ್, ಸುದೀಪ್, ಧ್ರುವ ಸರ್ಜಾ, ಹೀಗೆ ಎಲ್ಲರೂ ಅಂಬಿಯ ಅಂತಿಮಯಾತ್ರೆಯಲ್ಲಿ ಹೆಜ್ಜೆಯಿಟ್ಟರು. ಕನ್ನಡ ಚಿತ್ರರಂಗಕ್ಕೆ ಅಂಬರೀಶ್ ಮತ್ತು ವಿಷ್ಣುವರ್ಧನ್ ಇದ್ದಂತೆ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇರ್ತಾರೆ ಎಂದೇ ಹೇಳಲಾಗ್ತಿದೆ. ಆದ್ರೆ, ಕಾರಣಾಂತರಗಳಿಂದ ಸದ್ಯ ಇವರಿಬ್ಬರ ದೂರವಾಗಿದ್ದಾರೆ