• search
By : Oneindia Kannada Video Team
Published : May 02, 2018, 12:22

ಶನಿ ದೇವರಿಗೆ ಸಾಸಿವೆ ಎಣ್ಣೆ ಸಮರ್ಪಿಸುವುದು ಯಾಕೆ? ಇಲ್ಲಿದೆ ಕುತೂಹಲಕಾರಿ ಕಥೆ

ಜ್ಯೋತಿಷಿಗಳನ್ನು ಭೇಟಿಯಾದವರಿಗೆ ಅವರು ಹೇಳುವ ಮಾಹಿತಿಗಳಲ್ಲಿ ಕೆಲವು ವಾಕ್ಯಗಳು ಸಾಮಾನ್ಯವಾಗಿ ಪುನರಾವರ್ತನೆಯಾಗುತ್ತವೆ. ಅದು ಯಾವುದೆಂದರೆ "ನಿಮ್ಮ ಗ್ರಹಗತಿಯಲ್ಲಿ ಶನಿ ಭಾರಿಯಾಗಿದೆ, ಇದು ಶನಿದೆಸೆ" ಎಂಬುದು. ಹಿಂದೂ ಸಂಪ್ರದಾಯದಲ್ಲಿ ಶನಿಯ ಪ್ರಭಾವ ಸಾಡೆ ಸಾತಿ ಅಥವಾ ಏಳುವರೆ ವರ್ಷಗಳ ಕಾಲ ದೋಷಗಳನ್ನು ತರುತ್ತದೆ ಎಂದು ನಂಬಲಾಗಿದೆ. ಅಂದರೆ ಈ ಏಳೂವರೆ ವರ್ಷದ ಅವಧಿಯಲ್ಲಿ ಯಾವ ಕೆಲಸವೂ ಯಶಸ್ವಿಯಾಗುವುದಿಲ್ಲ. ಈ ಅವಧಿಯಲ್ಲಿ ಒತ್ತಡ, ಸೋಮಾರಿತನ, ಆರೋಗ್ಯ ಸಂಬಂಧಿ ತೊಂದರೆಗಳು ಮತ್ತು ವೃತ್ತಿಜೀವನದಲ್ಲಿ ಬಹಳಷ್ಟು ತೊಡಕುಗಳು ಎದುರಾಗುತ್ತವೆ. ಈ ತೊಂದರೆ ಅಥವಾ ದೋಷದಿಂದ ಮುಕ್ತಿಗೊಳ್ಳಲು ಜ್ಯೋತಿಷಿಗಳು ಹಲವು ಪರಿಹಾರಗಳನ್ನು ಸೂಚಿಸುತ್ತಾರೆ. ಇದರಲ್ಲಿ ಪ್ರಮುಖವಾದುದು ಶನಿದೇವನನ್ನು ಒಲಿಸಿಕೊಳ್ಳುವ ಪ್ರಯತ್ನ. ಇದರ ಪ್ರಯೋಗ ಶನಿದೇವರನ್ನು ಸಾಸಿವೆ ಎಣ್ಣೆಯಲ್ಲಿ ಸ್ನಾನ ಅಥವಾ ಅಭ್ಯಂಜನ ಮಾಡಿಸುವ ಪೂಜೆ ಪ್ರಮುಖವಾಗಿದೆ. ಆದರೆ ಹೆಚ್ಚಿನವರಿಗೆ ಇದರ ಮಹತ್ವ ಅಥವಾ ಕಾರಣವೇನೆಂದು ಗೊತ್ತಿಲ್ಲ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more