By: Oneindia Kannada Video Team
Published : November 30, 2017, 10:15

ಮಧ್ಯರಾತ್ರಿ 12ಗಂಟೆಗೆ ಮುಖ್ಯಮಂತ್ರಿಗಳ ಕನಸಿನಲ್ಲಿ ಬರುವವರು ಯಾರು?

Subscribe to Oneindia Kannada

ಚುನಾವಣೆಗೆ ಇನ್ನೂ ದಿನಾಂಕ ಘೋಷಣೆಯಾಗಲಿಲ್ಲ, ಆಗಲೇ ರಾಜಕಾರಣಿಗಳ ಮಾತಿನ ಭರಾಟೆ, ಜನರಿಗೆ ಅಸಹ್ಯವನ್ನೂ ಮೂಡಿಸುತ್ತಿದೆ, ಅಲ್ಲಲ್ಲಿ ಮನರಂಜನೆಯನ್ನೂ ನೀಡುತ್ತಿದೆ. ಮುಂದಿನ ಚುನಾವಣೆಯನ್ನು ಗೆದ್ದೇ ಗೆಲ್ಲುತ್ತೇನೆ ಎನ್ನುವ ಅದಮ್ಯ ವಿಶ್ವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬಿಜೆಪಿಯವರು ಟೀಕಿಸುವುದು, ಕಾಲೆಳೆಯುವುದು ಇದ್ದದ್ದೇ. ಆದರೆ ಕೇಂದ್ರ ಸಚಿವರೊಬ್ಬರು ಅವರನ್ನು ಗೇಲಿ ಮಾಡಿದ ರೀತಿ ವಿಶಿಷ್ಟವಾಗಿತ್ತು. ಬಾಗಲಕೋಟೆಯ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಮಾತನಾಡುತ್ತಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಮುಖ್ಯಮಂತ್ರಿಗಳನ್ನು ತಮಾಷೆಯಾಡಿದ್ದು ಹೀಗೆ, " ನಮ್ಮ ಮುಖ್ಯಮಂತ್ರಿಗಳಿಗೆ ಮಧ್ಯರಾತ್ರಿ ಹನ್ನೆರಡು ಗಂಟೆಗೆ ಕನಸು ಬೀಳುತ್ತದೆ.. ಅದೆಂಥಾ ಕನಸು ಅಂತೀರಾ.. ಬ್ಲ್ಯಾಕ್ ಎಂಡ್ ವೈಟ್ ಕನಸಲ್ಲಾ ಅದು... ಕಲರ್ ಫುಲ್ ಕನಸುಗಳು. ನೆರೆದಿದ್ದ ಜನಸ್ತೋಮ ಮೂಗಿನ ಮೇಲೆ ಬೆರಳಿಟ್ಟುಕೊಂಡು ಸಿದ್ದರಾಮಯ್ಯ ಸಾಹೇಬ್ರ ಕನಸಿನಲ್ಲಿ ಬರುವವರು ಯಾರಿರಬಹುದು.. ಐಶ್ವರ್ಯ ರೈನಾ.. ದೀಪಿಕಾ ಪಡುಕೋಣೆನಾ.. ಗುಳಿಗೆನ್ನೆ ಚೆಲುವೆ ರಚಿತಾ ರಾಮ್ ಇರಬಹುದೇ ಎಂದು ಮೆದುಳಿಗೆ ಕೆಲಸ ಕೊಟ್ಟಿದ್ದೇ ಕೊಟ್ಟಿದ್ದು

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!