By : Oneindia Kannada Video Team
Published : October 27, 2017, 12:22

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮದುವೆ ಆಗ್ತಾರಾ?

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮದುವೆ ಆಗ್ತಾರಾ? ಆಗೋದಾದ್ರೆ ಯಾವಾಗ? ಯಾರನ್ನ? ಎಂಬಿತ್ಯಾದಿ ಪ್ರಶ್ನೆಗಳು ಅದೆಷ್ಟೋ ಸಾರಿ ಚರ್ಚೆಯಾಗಿವೆ. ಆದರೆ ತಮ್ಮ ಮದುವೆಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಉತ್ತರಿಸಿದ ರಾಹುಲ್ ಗಾಂಧಿಯವರ ಜಾಣ್ಮೆಯ ಹೇಳಿಕೆ ಗೊಂದಲವನ್ನುಂಟು ಮಾಡಿದೆ. ನವದೆಹಲಿಯಲ್ಲಿ ಅ.26 ರಂದು ನಡೆದ ಪಿಎಚ್ ಡಿ ಆನ್ಯುವಲ್ ಅವಾರ್ಡ್ ಫಾರ್ ಎಕ್ಸಲೆನ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಕ್ಸರ್ ವಿಜೇಂದರ್ ಸಿಂಗ್ ಪ್ರಶ್ನೆಗೆ ಉತ್ತರಿಸಿದರು..."ನೀವು ಯಾವಾಗ ಮದುವೆ ಆಗುತ್ತೀರಾ?" ಎಂಬ ವಿಜೇಂದರ್ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, "ಆಗಬೇಕೆಂದಿರುವುವದು ಆಗಿಯೇ ಆಗುತ್ತದೆ. ಆದರೆ ನನಗೆ ನಂಬಿಕೆ ಇರುವುವದು ಗುರಿಯ ಮೇಲೆ(ಜಬ್ ಹೋಗಿ ತೋ ಹೋಗಿ, ಐ ಬಿಲೀವ್ ಇನ್ ಡೆಸ್ಟಿನಿ)" ಎಂಬ ಅಡ್ಡಗೋಡೆಯ ಮೇಲೆ ದೀಪವಿಟ್ಟಂಥ ಉತ್ತರ ನೀಡಿದ್ದಾರೆ. ರಾಹುಲ್ ತಮ್ಮ ಮದುವೆಯ ಕುರಿತು ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!