By : Oneindia Kannada Video Team
Published : January 03, 2018, 03:38

ನೀವೇನಾದರೂ ಉದ್ಯೋಗಕ್ಕೆ ಅಮೇರಿಕಾಗೆ ಹೋಗಬೇಕು ಅನ್ಕೊಂದಿದ್ರೆ ಈ ವಿಡಿಯೋ ಒಮ್ಮೆ ನೋಡಿ

ಅಮೆರಿಕದಲ್ಲಿರುವ ಭಾರತೀಯರ ಪಾಲಿಗೆ ಡೊನಾಲ್ಡ್ ಟ್ರಂಪ್ ವಿಲನ್ ಆಗಿಬಿಡುತ್ತಿದ್ದಾರಾ..? ಒಂದೊಮ್ಮೆ ಅವರ ಆಡಳಿತದ ಬಹು ನಿರೀಕ್ಷಿತ ಯೋಜನೆಯೊಂದು ಜಾರಿಗೆ ಬಂದಿದ್ದೇ ಆದಲ್ಲಿ ಅಮೆರಿಕದಲ್ಲಿರುವ 5 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಉದ್ಯೋಗ ಕಳೆದುಕೊಳ್ಳೋದು ಗ್ಯಾರಂಟಿ! ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸುವುದಕ್ಕೆ ಅಗತ್ಯವಿರುವ ಗ್ರೀನ್ ಕಾರ್ಡ್ ಪಡೆಯಲು ಪ್ರಯತ್ನಿಸುತ್ತಿರುವವರ H-1B ವೀಸಾ ಅವಧಿಯನ್ನು ವಿಸ್ತರಿಸದಿರಲು ಡೊನಾಲ್ಡ್ ಟ್ರಂಪ್ ಆಡಳಿತ ತೀರ್ಮಾನಿಸಿದ್ದೇ ಆದಲ್ಲಿ ಇಲ್ಲಿರುವ ಐದು ಲಕ್ಷಕ್ಕೂ ಹೆಚ್ಚು ಭಾರತೀಯರು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ. ಅಮೆರಿಕದ ಹೋಮ್ ಲ್ಯಾಂಡ್ ಸೆಕ್ಯುರಿಟಿ ವಿಭಾಗ ಹೇಳುವ ಪ್ರಕಾರ, 'ಈ ಹೊಸ ನಿಯಮ ಜಾರಿಗೆ ಬಂದರೆ ಭಾರತೀಯರಿಗೆ ಅಮೆರಿಕದಲ್ಲಿ ಉದ್ಯೋಗ ಪಡೆಯಲು ಅಗತ್ಯವಾದ H-1B ವೀಸಾ ಅವಧಿಯನ್ನು ವಿಸ್ತರಿಸಲು ಸಾಧ್ಯವಾಗುವುದಿಲ್ಲ. ಡೊನಾಲ್ಡ್ ಟ್ರಂಪ್ ಅವರು ಅಮೆರಿಕನ್ನರಿಗೇ ಹೆಚ್ಚು ಉದ್ಯೋಗ ನೀಡುವ, ಅಮೆರಿಕ ಪ್ರಜೆಗಳನ್ನು ಹೆಚ್ಚು ಆರ್ಥಿಕವಾಗಿ ಭದ್ರಗೊಳಿಸುವ ಉದ್ದೇಶ ಹೊಂದಿರುವುದರಿಂದ ಈ ನಿಯಮ ಜಾರಿಗೆ ಬರುವ ಎಲ್ಲಾ ಸಾಧ್ಯತೆಗಳಿವೆ'

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!