By : Oneindia Kannada Video Team
Published : December 08, 2017, 10:51

ವಿನಯ್ ಕುಮಾರ್ ಗೆ ಮೊದಲ ಹ್ಯಾಟ್ರಿಕ್

ಮುಂಬೈ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಟೆಸ್ಟ್ ಪಂದ್ಯದಲ್ಲಿ ವೇಗದ ಬೌಲರ್ ವಿನಯ್ ಕುಮಾರ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ. ನಾಗಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ 4ನೇ ಕ್ವಾಟರ್ ಫೈನಲ್ ಟಿಸ್ಟ್ ಪಂದ್ಯದ ಮೊದಲ ದಿನದ ಮೊದಲ ಸೆಷನ್‌ನಲ್ಲಿಯೇ ವಿನಯ್ ಕುಮಾರ್ ಅವರು ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ. ವಿನಯ್ ಕುಮಾರ್ ಗಳಿಸಿದ ಹ್ಯಾಟ್ರಿಕ್ ರಾಜ್ಯ ರಣಜಿ ತಂಡ ಗಳಿಸಿದ 10ನೇ ಹ್ಯಾಟ್ರಿಕ್ ವಿಕೆಟ್ ಆಗಿದೆ. ಆ ಮೂಲಕ ಅತಿ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಗಳಿಸಿದ ರಣಜಿ ತಂಡ ಎಂಬ ಹಿರಿಮೆಗೆ ಮತ್ತೊಂದು ಗರಿಯನ್ನು ಕರ್ನಾಟಕ ಸೇರಿಸಿಕೊಂಡಿದೆ. 6 ಬಾರಿ ಹ್ಯಾಟ್ರಿಕ್ ಗಳಿಸಿರುವ ಬಂಗಾಳ ತಂಡ ಎರಡನೇ ಸ್ಥಾನದಲ್ಲಿದೆ. ಈ ಮೂಲಕ ಹ್ಯಾಟ್ರಿಕ್ ವಿಕೆಟ್ ಪಡೆದ ಕರ್ನಾಟಕದ 10ನೇ ಬೌಲರ್ ಹಾಗೂ ಒಟ್ಟು ರಣಜಿ ಇತಿಹಾಸದಲ್ಲಿ ಹ್ಯಾಟ್ರಿಕ್ ಪಡೆದ 75ನೇ ಬೌಲರ್ ಎನಿಸಿಕೊಂಡರು ವಿನಯ್ ಕುಮಾರ್.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!