By : Oneindia Kannada Video Team
Published : October 26, 2017, 12:33

ವಿಧಾನಸೌಧ ಕಟ್ಟಿಸಿದ ಕೆಂಗಲ್ ಹನುಮಂತಯ್ಯ ಸಮಾಧಿಗೆ ಸರಕಾರದಿಂದ ಅವಮಾನ

ಸಿಲಿಕಾನ್ ಸಿಟಿಯ ವಿಧಾನಸೌಧದಲ್ಲಿ ಇಂದು ಹಬ್ಬವೋ ಹಬ್ಬ. 60 ವಸಂತಗಳನ್ನು ಪೂರೈಸಿದ ವಿಧಾನಸೌಧಕ್ಕೆ ವಜ್ರಮಹೋತ್ಸವದ ಸಡಗರ; ಹೂಮಾಲೆಗಳ ಆಡಂಬರ. ಆದರೆ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಸಮಾಧಿಗೆ ಒಂದು ಹೂವಿನ ಮಾಲೆಯೂ ಇಲ್ಲ. ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿನ ಕೆಂಗಲ್‌ ಹನುಮಂತಯ್ಯನವರ ಸಮಾಧಿಗೆ ಇಂದು ಒಂದೇ ಒಂದು ಹೂವಿನ ಹಾರವನ್ನೂ ಹಾಕದಷ್ಟು ಅಮಾನವೀಯತೆಯನ್ನು ಜಿಲ್ಲಾಡಳಿತ ಹಾಗೂ ಸರ್ಕಾರ ಮೆರೆದಿದೆ.ವಿಧಾನಸೌಧ ನಿರ್ಮಾತೃ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯನವರು ಕಟ್ಟಿಸಿದ ಕಟ್ಟಡಕ್ಕೆ ಕೊಟ್ಟ ಮಾನ್ಯತೆ ಕೆಂಗಲ್ ಹನುಮಂತಯ್ಯನವರಿಗೆ ಇಂದು ರಾಜ್ಯ ಸರ್ಕಾರ ನೀಡಿಲ್ಲ. ರಾಮನಗರ ಜಿಲ್ಲೆಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಕೆಂಗಲ್ ಬಳಿಯಿರುವ ಅವರ ಸಮಾಧಿಗೆ ನೆಪಮಾತ್ರಕ್ಕೊಂದು ವಿದ್ಯುತ್‌ ದೀಪವಿಲ್ಲ; ಸಮಾಧಿ ಸುತ್ತ ಶುಚಿತ್ವವಿಲ್ಲ. ಇದಲ್ಲದೇ ಇಂದು ವಜ್ರಮಹೋತ್ಸವಕ್ಕೆ ಕಾರಣರಾದ ಅವರನ್ನ ನೆನೆಯೋ ಕಾಯಕವೂ ಕೂಡಾ ನಡೆದಿಲ್ಲ. ಇನ್ನಷ್ಟು ತಿಳಿಯಲು ಈ ವೀಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!