By: Oneindia Kannada Video Team
Published : January 02, 2018, 10:49

ಚೊಚ್ಚಲ ರಣಜಿ ಟ್ರೋಫಿ ಗೆದ್ದುಕೊಂಡ ವಿದರ್ಭ ತಂಡ

Subscribe to Oneindia Kannada

2017-18ರ ರಣಜಿ ಫೈನಲ್ ನಲ್ಲಿ ವಿದರ್ಭ ತಂಡ ದೆಹಲಿಯನ್ನು ಒಂಭತ್ತು ವಿಕೆಟ್ ಗಳಿಂದ ಮಣಿಸಿ ಚೊಚ್ಚಲ ರಣಜಿ ಟ್ರೋಫಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇಂದೋರ್ ನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆದ 2017-18ರ ರಣಜಿ ಫೈನಲ್ ನಲ್ಲಿ ದೆಹಲಿ ನೀಡಿದ 26 ರನ್ ಗಳ ಸುಲಭದ ಗುರಿಯನ್ನು ಬೆನ್ನಟ್ಟಿದ ವಿದರ್ಭ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಈ ಮೂಲಕ ವಿದರ್ಭ ಚೊಚ್ಚಲ ರಣಜಿ ಟ್ರೋಫಿಗೆ ಮುತ್ತಿಕ್ಕಿತು. ದೆಹಲಿ ಮೊದಲ ಇನ್ನಿಂಗ್ಸ್: 295 ಮತ್ತು ಎರಡನೇ ಇನ್ನಿಂಗ್ಸ್ 280. ವಿದರ್ಭ ಇನ್ನಿಂಗ್ಸ್: ಮೊದಲ ಇನ್ನಿಂಗ್ಸ್ 547 ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ ಒಂದು ವಿಕೆಟ್ ಕಳೆದುಕೊಂಡು 32 ರನ್ ಗಳಿಸುವ ಮೂಲಕ ಜಯಗಳಿಸಿತು. ಈ ಮೂಲಕ ವಿದರ್ಭ 2017-18ರ ಸಾಲಿನ ರಣಜಿ ಟ್ರೋಫಿ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿತು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!