By: Oneindia Kannada Video Team
Published : October 25, 2017, 02:59

2018 ಡಿ.6ರೊಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆರಂಭ

Subscribe to Oneindia Kannada

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ 2018 ಡಿಸೆಂಬರ್ 6 ರೊಳಗೆ ಆರಂಭವಾಗಲಿದೆ ಎಂದು ವಿಶ್ವ ಹಿಂದೂ ಪರಿಷತ್ ಹಿರಿಯ ನಾಯಕ ಮತ್ತು ರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯ ರಾಮ್ ಬಿಲಾಸ್ ವೆದಾಂತಿ ಹೇಳಿದ್ದಾರೆ. ರಾಮಜನ್ಮಭೂಮಿ ನಿರ್ಮಾಣಕ್ಕೆ ಸ್ವತಃ ಮುಸ್ಲಿಂ ಸಮುದಾಯದವರೇ ಬೆಂಬಲ ನೀಡುತ್ತಿದ್ದಾರೆ. ಶಿಯಾ ವಕ್ಫ್ ಬೋರ್ಡ್ ರಾಮ ಮಂದಿರ ನಿರ್ಮಾಣಕ್ಕೆ ಈಗಾಗಲೇ ತನ್ನ ಬೆಂಬಲ ಸೂಚಿಸಿದೆ. ಕೆಲವು ರಾಜ್ಯಗಳ ವಿಧಾನ ಸಭಾ ಚುನಾವಣೆ ನಡೆದ ಮೇಲೆ ರಾಜ್ಯ ಸಭೆಯಲ್ಲಿ ಬಿಜೆಪಿ ಬಲ ಮತ್ತಷ್ಟು ಹೆಚ್ಚಲಿದೆ. ಅಕಸ್ಮಾತ್ ನ್ಯಾಯಾಲಯದ ತೀರ್ಪೇನಾದರೂ ರಾಮ ಜನ್ಮಭೂಮಿಯ ಪರವಾಗಿ ಬಾರದಿದ್ದರೆ ಮೇಲ್ಮನೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಾಸನವನ್ನು ಮಂಡನೆ ಮಾಡಲು ಇದರಿಂದ ಸಹಾಯವಾಗಲಿದೆ ಎಂಬ ಸೂಚನೆಯನ್ನು ಅವರು ನೀಡಿದ್ದಾರೆ...ವಿಶ್ವ ಹಿಂದೂ ಪರಿಷತ್ ಹಿರಿಯ ನಾಯಕರ ಈ ಹೇಳಿಕೆ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ..ಸಂಘ ಪರಿವಾರ ಮುಂದಿನ ವರ್ಷದೊಳಗೆ ರಾಮ ಮಂದಿರ ನಿರ್ಮಾಣ ಮಾಡೋದಾಗಿ ಹೇಳಿದೆ ಇದ್ರ ಬಗ್ಗೆ ಕೇಂದ್ರ ಸರ್ಕಾರ ಏನ್ ಹೇಳಲಿದೆ ಕಾದುನೋಡಬೇಕು..

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!