By: Oneindia Kannada Video Team
Published : November 14, 2017, 05:52

ಮೈಸೂರಿನ ಮಹಾರಾಜಾ ಯದುವೀರ್ ಅರಸ್ ಗೆ ಧನ್ಯವಾದ ಹೇಳಿದ ನಟ ಉಪೇಂದ್ರ

Subscribe to Oneindia Kannada

'ಮಹಾರಾಜ'ರಿಗೆ ಧನ್ಯವಾದ ತಿಳಿಸಿದ 'ರಿಯಲ್ ಸ್ಟಾರ್' ಉಪೇಂದ್ರ. ರಿಯಲ್ ಸ್ಟಾರ್ ಉಪೇಂದ್ರ ತಮ್ಮದೇಯಾದ ರಾಜಕೀಯ ಪಕ್ಷವನ್ನ ಕಟ್ಟಿರುವುದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಕೆಲ ರಾಜಕೀಯ ವ್ಯಕ್ತಿಗಳು ಇದೆಲ್ಲಾ ವರ್ಕ್ ಆಗಲ್ಲ ಎಂದಿದ್ದಾರೆ. ಆದರೆ ಮೈಸೂರಿನ ಮಹಾರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಉಪ್ಪಿ ಪಕ್ಷವನ್ನ ಮೆಚ್ಚಿ ಕೊಂಡಾಡಿದ್ರು. ಈ ವಿಚಾರವನ್ನ ತಿಳಿದ ಉಪೇಂದ್ರರಿಗೆ ಮತ್ತಷ್ಟು ಎನರ್ಜಿ ಬಂದಿದೆ. ಸಾಮಾಜಿಕ ಜಾಲತಾಣದ ಮೂಲಕ ಮಹಾರಾಜರಿಗೆ ಧನ್ಯವಾದ ಹೇಳಿರುವ ಉಪ್ಪಿ, ''ನಿಮ್ಮ ಪ್ರೀತಿಗೆ ಧನ್ಯವಾದಗಳು, ನಮಗೆ ಹಾಗೂ ಮತ್ತಷ್ಟು ಯುವ ಜನರಿಗೆ ನೀವು ಉತ್ಸಾಹ ತುಂಬಿದ್ದೀರಿ. ಇದಕ್ಕೆ ನಾನು ಎಂದಿಗೂ ಋಣಿ'' ಎಂದಿದ್ದಾರೆ. ತಮ್ಮ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಉಪ್ಪಿ ಹೇಳಿಕೊಂಡಿದ್ದು ಅಭಿಮಾನಿಗಳು ಈ ಪೋಸ್ಟ್ ಗೆ ಸಾಕಷ್ಟು ಕಾಮೆಂಟ್ ಮಾಡಿದ್ದಾರೆ.ರಾಜಕೀಯ ವಲಯ ಬಿಟ್ಟು ಸಾಮಾನ್ಯ ಜನರಿಂದ ಉಪ್ಪಿಯ ಹೊಸ ರಾಜಕೀಯ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಉಪೇಂದ್ರ ಅವರ ಕನಸಿಗೆ ಬೆನ್ನೆಲುಬಾಗಿ ಯುವಕರೆಲ್ಲರೂ ನಿಲ್ಲುತ್ತೇವೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!