By: Oneindia Kannada Video Team
Published : December 09, 2017, 05:57

ಶಂಕ್ರಣ್ಣನ ಕನಸು ಹೊತ್ತು ಆಟೋದಲ್ಲಿ ಬಂದ ಉಪೇಂದ್ರ Filmibeat Kannada

Subscribe to Oneindia Kannada

ನಮ್ಮ ಪ್ರಜಾಕೀಯ ಪಕ್ಷಕ್ಕೆ ಆಟೋ ಚಿಹ್ನೆ ದೊರೆತಿದೆ. ಆ ಕಾರಣಕ್ಕೆ ಸುದ್ದಿಗೋಷ್ಠಿಗೆ ಆಟೋ ಮೂಲಕ ಬಂದಿರುವುದಾಗಿ ನಟ ಉಪೇಂದ್ರ ಹೇಳಿದರು. ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಓರ್ವ ನಾಗರಿಕನಾಗಿ ಸುಮ್ಮನೆ ಕುಳಿತುಕೊಳ್ಳಬಾರದು ಎಂಬ ಕಾರಣಕ್ಕೆ ಬಂದಿದ್ದೇನೆ. ಎಂದ ಅವರು, ರಾಜ್ಯದ ೨೨೪ಕ್ಷೇತ್ರಗಳಲ್ಲಿ ಪ್ರಜಾಕೀಯ ಪಕ್ಷ ಸ್ಪರ್ಧಿಸಲಿದೆ. ಅಭ್ಯರ್ಥಿಗಳ ಆಯ್ಕೆ, ಅವರ ಸರಿ-ತಪ್ಪುಗಳಿಗೆ ನಾನೇ ಹೊಣೆ ಎಂದು ನಟ ಉಪೇಂದ್ರ ಹೇಳಿದರು. ನಮ್ಮ ಪ್ರಜಾಕೀಯ ಪಕ್ಷಕ್ಕೆ ಆಟೋ ಚಿಹ್ನೆ ದೊರೆತಿದೆ. ಆ ಕಾರಣಕ್ಕೆ ಸುದ್ದಿಗೋಷ್ಠಿಗೆ ಆಟೋ ಮೂಲಕ ಬಂದಿರುವುದಾಗಿ ಹೇಳಿದರು. ಆಟೋ ಎಂದಾಕ್ಷಣ ಎಲ್ಲರಿಗೂ ಶಂಕರ್ ನಾಗ್ ನೆನಪಾಗುತ್ತಾರೆ. ಶಂಕರ್ ನಾಗ್ ಅವರಿಗೆ ಕರ್ನಾಟಕದ ಅಭಿವೃದ್ಧಿ ಬಗ್ಗೆ ಕನಸಿತ್ತು. ನಮ್ಮೆಲ್ಲರ ನೆಚ್ಚಿನ ನಟ ಶಂಕರ್ ನಾಗ್ ಕನಸನ್ನು ನನಸು ಮಾಡಬೇಕಿದೆ. ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪ್ರಜಾಕೀಯ ಕೆಲಸ ಮಾಡಲಿದೆ ಎಂದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!