By : Oneindia Kannada Video Team
Published : January 16, 2017, 07:23

ಸಮಾಜವಾದಿ ಪಕ್ಷದ 'ಸೈಕಲ್' ಲಾಂಛನ ಅಖಿಲೇಶ್ ಪಾಲು

ಸಮಾಜವಾದಿ ಪಕ್ಷದ ಅಧಿಕೃತ ಲಾಂಛನ 'ಸೈಕಲ್' ಅನ್ನು ಮುಲಾಯಂ ಸಿಂಗ್ ಯಾದವ್ ಅವರಿಂದ ಕಿತ್ತುಕೊಂಡು ಅವರ ಮಗ ಅಖಿಲೇಶ್ ಯಾದವ್ ಅವರಿಗೆ ಚುನಾವಣಾ ಆಯೋಗ ನೀಡಿದ್ದು, ಮುಲಾಯಂ ಅವರಿಗೆ ಭಾರೀ ಹೊಡೆತ ನೀಡಿದೆ. ಅಖಿಲೇಶ್ ಅವರ ಪಕ್ಷವನ್ನೇ ಅಧಿಕೃತ ಪಕ್ಷವೆಂದು ಚುನಾವಣಾ ಆಯೋಗ ಗುರುತಿಸಿದೆ. ಮೇಲ್ನೋಟಕ್ಕೆ ಅಪ್ಪಮಗನ ನಡುವೆ ಸಂಧಾನ ನಡೆದಿದೆ ಎಂದು ಕಾಣಿಸುತ್ತಿದ್ದರೂ ಒಳಗಿಂದೊಳಗೆ ಕಚ್ಚಾಟ ನಡೆಯುತ್ತಲೇ ಇದೆ. ಇವರಿಬ್ಬರ ಕಚ್ಚಾಟವನ್ನು ಅವರ ರಾಜಕೀಯ ವಿರೋಧಿಗಳು ನಾಟಕ ಎಂದೂ ಕರೆದಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!