By : Oneindia Kannada Video Team
Published : December 14, 2017, 01:58

ಗುಜರಾತ್ ಚುನಾವಣೆಯಲ್ಲಿ ಜಯ ನಮ್ಮದೇ: ಸಚಿವ ಯು ಟಿ ಖಾದರ್ ಸಂದರ್ಶನ

ಉತ್ತರ ಕನ್ನಡ ಜಿಲ್ಲೆಯಲ್ಲಿನ ಅಶಾಂತಿ, ಕರ್ನಾಟಕದಲ್ಲಿ ಚುನಾವಣಾ ವರ್ಷ, ಗುಜರಾತ್ ಚುನಾವಣಾ ಫಲಿತಾಂಶ ಮುಂತಾದ ವಿಚಾರಗಳನ್ನು ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರದ ಪ್ರಭಾವಿ ಸಚಿವ, ಆಹಾರ ಮತ್ತು ನಾಗರೀಕ ಸರಬರಾಜು ಪೂರೈಕೆ ಇಲಾಖೆಯ ಇನ್ಚಾರ್ಜ್ ಯು ಟಿ ಖಾದರ್ ಜೊತೆಗೆ ನಮ್ಮ ಒನ್ ಇಂಡಿಯಾ ತಂಡ ಎಕ್ಸ್ಕ್ಲೂಸಿವ್ ಸಂದರ್ಶನವನ್ನು ನೆಡೆಸಿತು . ಸಂದರ್ಶನದ ಉದ್ದಕ್ಕೂ ತಮ್ಮ ಸರಕಾರದ ಸಾಧನೆ, ಬಿಜೆಪಿಯ ಮತಬ್ಯಾಂಕ್ ರಾಜಕಾರಣ, ಆಹಾರ ಇಲಾಖೆಯನ್ನು ನಿಭಾಯಿಸುತ್ತಿರುವ ರೀತಿಯ ಬಗ್ಗೆ ಸಚಿವ ಖಾದರ್ ವಿವರಿಸಿದ್ದಾರೆ. ಗುಜರಾತ್ ನಲ್ಲಿನ ಪ್ರಚಾರ, ಕರಾವಳಿ ಭಾಗದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ, ಕಲ್ಲಡ್ಕ ಪ್ರಭಾಕರ್ ಭಟ್ರ ಶಾಲೆಗೆ ಅನುದಾನ ನಿಲ್ಲಿಸಿರುವ ಬಗ್ಗೆ ಸರಕಾರದ ನಿಲುವು ಏನು ಎನ್ನುವುದನ್ನು ಸಚಿವರು ಸಂದರ್ಶನದಲ್ಲಿ ಹೇಳಿದ್ದಾರೆ.ಗುಜರಾತ್ ಚುನಾವಣೆಯಲ್ಲಿ ಜಯ ನಮ್ಮದೇ ಎಂದು ಇದೇ ಸಂದರ್ಭದಲ್ಲಿ ಉ ಟಿ ಖಾದರ್ ಹೇಳಿದರು .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!