By : Oneindia Kannada Video Team
Published : December 06, 2017, 12:55

ಮುಖ ಮುಚ್ಚಿಕೊಂಡ ಲಂಕನ್ನರಿಗೆ ಮಂಗಳಾರತಿ ಮಾಡಿದ ಟ್ವೀಟ್ ಲೋಕ

ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದೆ ಎಂಬುದು ಮುಚ್ಚಿಡುವಂಥ ವಿಷಯವೇನಲ್ಲ. ಆದರೆ, ಪ್ರವಾಸಿ ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರರು ಮೈದಾನದಲ್ಲಿ ಮುಖ ಮುಚ್ಚಿಕೊಂಡು ಆಟವಾಡಿದ್ದು ನೋಡಿ ಟ್ವೀಟ್ ಲೋಕ ಕೆರಳಿದೆ. ಓವರ್ ಆಗಿ ಪ್ರತಿಕ್ರಿಯಿಸಬೇಡಿ ಎಂದು ಎಚ್ಚರಿಸಿದೆ. ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಭಾರತ-ಶ್ರೀಲಂಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ವಿಪರೀತ ಮಾಲಿನ್ಯದಿಂದಾಗಿ ಮೈದಾನದಲ್ಲಿ ಆಟವಾಡಲು ಸಾಧ್ಯವಿಲ್ಲ ಎಂದು ಶ್ರೀಲಂಕಾ ತಂಡದ ಆಟಗಾರರು ದೂರಿದ ಪ್ರಸಂಗ ನೆನಪಿರಬಹುದು. ಇದಕ್ಕೆ ಟ್ವಿಟ್ಟರ್ ನಲ್ಲಿ ಭಾರಿ ಪ್ರತಿಕಿಯೆಗಳು ಬಂದಿವೆ. ಲಂಚ್ ಬಳಿಕ ಮೈದಾನ ತೊರೆಯುವುದಾಗಿ ಶ್ರೀಲಂಕಾ ಆಟಗಾರರು ಪಟ್ಟು ಹಿಡಿದ ಘಟನೆ ನಡೆಯಿತು. ಯಾವುದೇ ಸಂಧಾನ ನಡೆದರೂ ಫಲಕಾರಿಯಾಗದೆ 17 ನಿಮಿಷಗಳ ಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಮೈದಾನದಲ್ಲಿದ್ದ ಪ್ರೇಕ್ಷಕರು, ಅಂಪೈರ್, ಟೀಂ ಇಂಡಿಯಾದ ಆಟಗಾರರಿಗೆ ಇಲ್ಲದ ಮಾಲಿನ್ಯ ಇವರಿಗೆ ಮಾತ್ರ ತಟ್ಟುತ್ತಿದೆ ಎಂದು ವ್ಯಂಗ್ಯದ ಟ್ವೀಟ್ ಗಳು ಬಂದಿವೆ...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!