By: Oneindia Kannada Video Team
Published : November 28, 2017, 10:14

ಮೋದಿ ಜತೆ ವೇದಿಕೆ ಹಂಚಿಕೊಳ್ಳಲಿರುವ ಟ್ರಂಪ್ ಪುತ್ರಿ

Subscribe to Oneindia Kannada

ಮುತ್ತಿನ ನಗರಿ ಹೈದರಾಬಾದಿನಲ್ಲಿ ಇಂದು ಜಾಗತಿಕ ಉದ್ಯಮಶೀಲತೆ ಶೃಂಗಸಭೆ (ಜಿಇಎಸ್) ಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಮತ್ತು ಸಲಹೆಗಾರ್ತಿ ಇವಾಂಕಾ ಟ್ರಂಪ್ ಮೂರು ದಿನ ಕಾರ್ಯಕ್ರರ್ಮದಲ್ಲಿ ತಮ್ಮ ದೇಶದ ನಿಯೋಗವನ್ನು ಪ್ರತಿನಿಧಿಸಲಿದ್ದಾರೆ. ಶೃಂಗಸಭೆಯ ಆತಿಥ್ಯ ವಹಿಸಿರುವ ಹೈದರಾಬಾದಿನಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ. 18 ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿಗಳು ಸುರಕ್ಷತೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇವಾಂಕಾ ಟ್ರಂಪ್ ಅವರಿಗೆ ಭರ್ಜರಿ ಆತಿಥ್ಯ ನೀಡಲು ಸರ್ಕಾರ ಸಿದ್ಧವಾಗಿದೆ. ಪ್ರಧಾನಿ ಮೋದಿ ಅವರು ಫಲಕ್ನಾಮ ಪ್ಯಾಲೇಸ್ ನಲ್ಲಿ ಅತಿದೊಡ್ಡ ಔತಣಕೂಟ ಏರ್ಪಡಿಸಿದ್ದಾರೆ. ಈ ನಡುವೆ ಮೋದಿ ಅವರು ಇಂದು ಮಧ್ಯಾಹ್ನ ಹೈದರಾಬಾದ್ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಇವಾಂಕಾ ಅವರು ಪತಿ ಜತೆಗೆ ಚಾರ್ಮಿನಾರ್ ಗೆ ಭೇಟಿ ನೀಡಲಿದ್ದಾರೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!