By: Oneindia Kannada Video Team
Published : January 23, 2018, 09:16

ತಿರುಮಲ ತಿರುಪತಿ ತಿಮ್ಮಪ್ಪನ ಮೂರ್ತಿಯ ಹಿಂದಿದೆ ಚಿದಂಬರ ರಹಸ್ಯ

Subscribe to Oneindia Kannada

ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳಿರುವ ರಾಜ್ಯವೆಂದರೆ ತಮಿಳುನಾಡು. ಆದರೆ ಅತಿ ಹೆಚ್ಚು ಶ್ರೀಮಂತ ದೇವಾಲಯವೆಂದರೆ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ತಿರುಮಲ ವೆಂಕಟೇಶ್ವರ ದೇವಾಲಯ. ತಿರುಪತಿಯ ಬಳಿ ಇರುವ ತಿರುಮಲ ಬೆಟ್ಟದ ತುದಿಯಲ್ಲಿರುವ ಈ ದೇವಸ್ಥಾನ ಒಂದು ಅತ್ಯಂತ ಪ್ರಾಚೀನ ದೇವಾಲಯವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುವ ಮತ್ತು ಭಾರತದಲ್ಲಿಯೇ ಅತಿ ಹೆಚ್ಚು ದೇಣಿಗೆಯನ್ನು ದಾನರೂಪದಲ್ಲಿ ಸ್ವೀಕರಿಸುವ ದೇವಾಲಯವಾಗಿದೆ.

ತಿರುಮಲ ಪ್ರದೇಶದಲ್ಲಿರುವ ಒಟ್ಟು ಏಳು ಬೆಟ್ಟಗಳಲ್ಲಿ ಒಂದಾದ ವೆಂಕಟಾದ್ರಿ ಬೆಟ್ಟದ ಮೇಲೆ ಈ ದೇವಸ್ಥಾನವಿರುವ ಕಾರಣಕ್ಕೇ ಇದಕ್ಕೆ ಏಳು ಬೆಟ್ಟಗಳ ದೇವಸ್ಥಾನ ಎಂಬ ಅನ್ವರ್ಥನಾಮವೂ ಬಂದಿದೆ. ವೆಂಕಟೇಶ್ವರನಿಗೆ ವೆಂಕಟಾಚಲಪತಿ, ಶ್ರೀನಿವಾಸ, ಬಾಲಾಜಿ, ತಿರುಪತಿ ತಿಮ್ಮಪ್ಪಎಂಬ ಇತರ ಹೆಸರುಗಳೂ ಇವೆ.

ವೆಂಕಟೇಶ್ವರನು ದೇವರ ಒಂದು ಅವತಾರವಾಗಿದ್ದು ಈತನಲ್ಲಿ ಬೇಡಿಕೊಂಡ ಯಾವುದೇ ಹರಕೆ ಫಲಿಸದೇ ಇರುವುದಿಲ್ಲ ಎಂಬ ಕಾರಣಕ್ಕೆ ನಿತ್ಯವೂ ಲಕ್ಷಾಂತರ ಭಕ್ತರು ತಿರುಪತಿಗೆ ಆಗಮಿಸಿ ತಮ್ಮ ಶಕ್ತಿಗೆ ಅನುಸಾರ ಯಾವುದಾದರೊಂದು ಕಾಣಿಕೆಯನ್ನು ನೀಡುತ್ತಾರೆ.

ಈ ಕಾಣಿಕೆಗಳ ವೈವಿಧ್ಯವೂ ಅಚ್ಚರಿ ಮೂಡಿಸುವಂತಿದೆ. ಬನ್ನಿ ತಿರುಪತಿ ದೇವಾಲಯದ ಕುರಿತು ನಮಗೆ ತಿಳಿಯದೇ ಇರುವ ಅನೇಕ ವಿಚಾರಗಳು ಇನ್ನೂ ಇವೆ, ಅವು ಯಾವುದು ಎಂಬುದನ್ನು ನೋಡೋಣ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!