By: Oneindia Kannada Video Team
Published : November 21, 2017, 02:36

ಮಾಜಿ ಪತ್ನಿಯ ಜುಟ್ಟು ಹಿಡಿದು ಹಲ್ಲೆ ಮಾಡಿದ ತೆಲಂಗಾಣ ರಾಜಕಾರಣಿ

Subscribe to Oneindia Kannada

ಮಾಜಿ ಪತ್ನಿಯ ಜುಟ್ಟು ಹಿಡಿದು ಹಲ್ಲೆ ಮಾಡಿದ ತೆಲಂಗಾಣ ರಾಜಕಾರಣಿ!
ಹೈದರಾಬಾದ್, ನವೆಂಬರ್ 21: ತನ್ನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಪತ್ನಿಯನ್ನು ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಮುಖಂಡನೊಬ್ಬ ಸಾರ್ವಜನಿಕವಾಗಿ ಥಳಿಸಿ, ಕಿರುಕುಳ ನೀಡಿದ ವಿಡಿಯೋವೊಂದು ಇದೀಗ ಸಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಗಿದೆ.ಟಿಆರ್ ಎಸ್ ಮುಖಂಡ ಶ್ರೀನಿವಾಸ್ ರೆಡ್ಡಿ ಎಂಬುವವರ ಮೊದಲ ಪತ್ನಿ, ರೆಡ್ಡಿಯ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು. ಇದರಿಂದ ಕೋಪಗೊಂಡ ಶ್ರೀನಿವಾಸ್ ರೆಡ್ಡಿ ಆಕೆಗೆ ಏಕಾಏಕಿ ಥಳಿಸುವುದಕ್ಕೆ ಆರಂಭಿಸಿದ್ದು, ಇದನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಮೊದಲ ಪತ್ನಿ ಮತ್ತು ಎರಡನೇ ಪತ್ನಿಯರ ನಡುವೆ ನಡೆದ ವಾಗ್ವಾದವೇ ಈ ಘಟನೆಗೆ ಕಾರಣ.ಮಾಜಿ ಪತ್ನಿಯ ಜುಟ್ಟು ಹಿಡಿದು, ಥಳಿಸಿ, ತಳ್ಳಿ, ನಿರ್ದಯವಾಗಿ ವರ್ತಿಸಿದ ರೆಡ್ಡಿ ವಿರುದ್ಧ ಆಕೆಯ ಕುಟುಂಬಸ್ಥರು 'ಕೊಲೆಯತ್ನ'ದ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು, ಶ್ರೀನಿವಾಸ್ ರೆಡ್ಡಿಯನ್ನು ವಶಕ್ಕೆ ಪಡೆದಿದ್ದಾರೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!