By : Oneindia Video Kannada Team
Published : September 18, 2019, 05:00
Duration : 01:35
01:35
ಭಾರತದ ಬಳಿ ಇರುವುದು ಇನ್ನು ಕೇವಲ ಮೂರೇ ದಿನ ಮಾತ್ರ | Chandrayaan-2
ಭಾರತದ ಹೆಮ್ಮೆಯ ಚಂದ್ರಯಾನ-2 ಯೋಜನೆಯ ಭಾಗವಾದ ವಿಕ್ರಂ ಲ್ಯಾಂಡರ್ಅನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಸುವ ಪ್ರಯತ್ನ ನಡೆದು ಬುಧವಾರಕ್ಕೆ 11 ದಿನ. ಇನ್ನೇನು ಚಂದ್ರನನ್ನು ಮುಟ್ಟಲಿದೆ ಎನ್ನುವಷ್ಟರಲ್ಲಿ ಇಸ್ರೋ ಕೇಂದ್ರದಿಂದ ಸಂಪರ್ಕ ಕಡಿದುಕೊಂಡ ವಿಕ್ರಂ ಲ್ಯಾಂಡರ್ ಜತೆ ಪುನಃ ನಂಟು ಬೆಸೆಯಲು ಇಸ್ರೋ ನಡೆಸಿದ ಪ್ರಯತ್ನಗಳು ಸಫಲವಾಗಿಲ್ಲ. ಇಸ್ರೋ ಮುಂದೆ ಇರುವುದು ಇನ್ನು ಮೂರೇ ಮೂರು ದಿನ. ಅಷ್ಟರಲ್ಲಿ ಒಮ್ಮೆಯಾದರೂ ವಿಕ್ರಮ ಸಂಪರ್ಕಕ್ಕೆ ಸಿಗಲಿ ಎನ್ನುವುದು ಎಲ್ಲರ ಆಶಯ.