By: Oneindia Kannada Video Team
Published : December 24, 2017, 10:58

ತಮಿಳುನಾಡಿನ ಆರ್ ಕೆ ನಗರ ಕ್ಷೇತ್ರದ ಉಪ ಚುನಾವಣಾ ಫಲಿತಾಂಶ : ಮತ ಎಣಿಕೆ ಶುರು

Subscribe to Oneindia Kannada

ತಮಿಳುನಾಡಿನ ಆರ್.ಕೆ.ನಗರ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಗುರುವಾರ ನಡೆದ ಉಪ ಚುನಾವಣೆಯಲ್ಲಿ ಶೇ 73.45ರಷ್ಟು ಮತದಾನವಾಗಿತ್ತು.ಭಾನುವಾರ ಬೆಳಗ್ಗೆ ಮರೀನಾ ಬೀಚ್ ಸಮೀಪದ ರಾಣಿ ಮೇರಿ ಕಾಲೇಜಿನಲ್ಲಿ ಉಪ ಚುನಾವಣೆ ಮತ ಎಣಿಕೆ ಆರಂಭವಾಗಿದೆ. 19 ಸುತ್ತುಗಳಲ್ಲಿ ಎಣಿಕೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು.ರಾಧಾಕೃಷ್ಣನ್ ನಗರ (ಆರ್.ಕೆ.ನಗರ) ನಗರದಲ್ಲಿ ಕಳೆದ 40 ವರ್ಷಗಳಲ್ಲಿ ನಡೆದ 11 ಚುನಾವಣೆಗಳಲ್ಲಿ 7ರಲ್ಲಿ ಎಐಎಡಿಎಂಕೆ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ 59 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇವರಲ್ಲಿ 47 ಜನ ಪಕ್ಷೇತರ ಅಭ್ಯರ್ಥಿಗಳು.ಡಿಎಂಕೆಯಿಂದ ಮರುದು ಗಣೇಶನ್, ಎಐಎಡಿಎಂಕೆಯಿಂದ ಇ. ಮಧುಸೂದನ್, ಶಶಿಕಲಾ ಬಣದಿಂದ ಟಿಟಿವಿ ದಿನಕರನ್ ಸ್ಪರ್ಧೆಯಲ್ಲಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಬಣದಲ್ಲಿ ಯಾವ ಅಭ್ಯರ್ಥಿಗೆ ಜಯ ಸಿಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!