By: Oneindia Kannada Video Team
Published : December 15, 2017, 04:57

ಈ ಲೀಗ್ ನಲ್ಲಿ ಶತಕ ಬಾರಿಸಿದ್ರೆ ಅಪಾರ್ಟ್ಮೆಂಟ್ ಕೊಡ್ತಾರೆ

Subscribe to Oneindia Kannada

ಶಾರ್ಜಾದಲ್ಲಿ ಟಿ-10 ಕ್ರಿಕೆಟ್ ಲೀಗ್ ಗೆ ಭರ್ಜರಿಯಾಗಿ ಚಾಲನೆ ಸಿಕ್ಕಿದೆ. 10 ಓವರ್ ಗಳ ಹೊಸ ಬಗೆ ಆಟ ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಟಿ-10 ಪಂದ್ಯದಲ್ಲೇನಾದ್ರೂ ಶತಕ ಬಾರಿಸಿದ್ರೆ, ಬಂಪರ್ ಉಡುಗೊರೆ ಕೂಡ ಸಿಗಲಿದೆ. ಸೆಂಚುರಿ ಸರದಾರರಿಗೆ ದುಬೈನಲ್ಲಿ 88 ಲಕ್ಷ ಬೆಲೆಬಾಳುವ ಅಪಾರ್ಟ್ಮೆಂಟ್ ಅನ್ನು ಗಿಫ್ಟ್ ಆಗಿ ನೀಡಲಾಗುತ್ತದೆ. ಮರಾಠಾ ಅರೇಬಿಯನ್ಸ್ ತಂಡದ ಮಾಲೀಕರಾಗಿರೋ ಅಲಿ ತಂಬಿ ಈ ಆಫರ್ ನೀಡಿದ್ದಾರೆ. ವೀರೇಂದ್ರ ಸೆಹ್ವಾಗ್ ಹಾಗೂ ಕಮ್ರಾನ್ ಅಕ್ಮಲ್ ಅವರಂತಹ ಆಟಗಾರರಿಗೆ ಕಷ್ಟವೇನಲ್ಲ ಅಂತಾನೂ ಹೇಳಿದ್ದಾರೆ. ಅಕ್ಮಲ್ 70 ಬಾಲ್ ಗಳಲ್ಲಿ 150 ರನ್ ಸಿಡಿಸಿದ್ದಾರೆ. ಹಾಗಾಗಿ 40 ಬಾಲ್ ಗಳಲ್ಲಿ ಶತಕ ಬಾರಿಸಿದ್ರೆ ಅಚ್ಚರಿಯೇನಲ್ಲ ಎಂದಿದ್ದಾರೆ. ದಿನದ 2ನೇ ಪಂದ್ಯದಲ್ಲಿ ಮರಾಠ ಅರೇಬಿಯನ್ಸ್-ಪಾಕ್​ತೂನ್ಸ್ ಸೆಣಸಿದ್ದವು. ಪಾಕ್​ತೂನ್ಸ್ ಪರ ಅಫ್ರಿದಿ ಹ್ಯಾಟ್ರಿಕ್ ಗಳಿಸಿದರೆ, ಸೆಹ್ವಾಗ್ ಅವರ ಮರಾಠ ತಂಡ 25 ರನ್ ಗಳಿಂದ ಪಂದ್ಯವನ್ನು ಕಳೆದುಕೊಂಡಿತು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!