By : Oneindia Kannada Video Team
Published : November 09, 2017, 06:16

ಅಪ್ಪಾಜಿ ಕ್ಯಾಂಟೀನ್ ನಲ್ಲಿ ಟಿ ಎ ಶರವಣ ಹಾಗು ನಟಿ ಶರ್ಮಿಳಾ ಮಾಂಡ್ರೆ

ಅಪ್ಪಾಜಿ ಕ್ಯಾಂಟೀನಿನಲ್ಲಿ ಶರವಣಜಿ, ಮಾಂಡ್ರೆ ಮ್ಯಾಮ್. ಬೆಂಗಳೂರಿನ ಹನುಮಂತ ನಗರದಲ್ಲಿರುವ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶರವಣ ಅವರ ಅಪ್ಪಾಜಿ ಕ್ಯಾಂಟಿನ್ ಗೆ ಇಂದಿಗೆ (ನವೆಂಬರ್ 9) ನೂರು ದಿನಗಳ ಸಂಭ್ರಮ. ದೇವೇಗೌಡ ಅಪ್ಪಾಜಿ ಕ್ಯಾಂಟಿನ್ ಗೆ ನೂರು ದಿನಗಳ ಸಂಭ್ರಮದಲ್ಲಿ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಭಾಗವಹಿಸಿ ಮೆರಗು ನೀಡಿದರು. ಈ ಶತದಿನೋತ್ಸವದ ದಿನದಂದು ಶರ್ಮಿಳಾ ಮಾಂಡ್ರೆ ಸಾರ್ವಜನಿಕರಿಗೆ ಊಟ ಬಡಿಸಿ, ತಾವು ಸೇವಿಸಿದರು.ಇದೇ ವೇಳೆ ಮಾತನಾಡಿದ ಶರವಣ, ಬಡ ಜನರ ಹಸಿವು ನೀಗಿಸಲು ಏನಾದರೂ ಮಾಡಬೇಕು ಎನ್ನುವ ಮಾಜಿ ಪ್ರಧಾನಿ ದೇವೇಗೌಡರ ಆಸೆಯದಂತೆ ಅಗಸ್ಟ್ 2 ರಂದು ಪ್ರಾರಂಭಿಸಾಗಿದ್ದು, ಯಶಸ್ವಿಯಾಗಿ ನೂರು ದಿನಗಳನ್ನು ಪೂರೈಸಿದೆ. ಈ ನೂರು ದಿನಗಳಲ್ಲಿ ಪ್ರತಿನಿತ್ಯ ಆಟೋ ಡ್ರೈವರ್, ವಿದ್ಯಾರ್ಥಿಗಳು, ಬಡವರು ನಮ್ಮ ಕ್ಯಾಂಟಿನ್ ನಲ್ಲಿ ಊಟ ಮಾಡಿದ್ದಾರೆ. ನಮ್ಮ ಕ್ಯಾಂಟಿನ್ ನಲ್ಲಿ ಶುಚಿ ರುಚಿಯಾದ ಉಪಹಾರ ಹಾಗೂ ಊಟವನ್ನು ನೀಡಲಾಗುತ್ತಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!