By : Oneindia Kannada Video Team
Published : July 04, 2017, 06:13

8 ವರ್ಷದ ಸೈಯದಾ ನಬೀಹಾ ಲ್ಯೂಕೆಮಿಯಾದಿಂದ ಬಳಲುತ್ತಿರುವ ಪುಟ್ಟ ಕಂದ

ಈ ಎಂಟು ವರ್ಷದ ಹುಡುಗಿ ಹೆಸರು ಸೈಯದಾ ನಬೀಹಾ. ಕರ್ನಾಟಕದ ಮೂಲೆಯಲ್ಲಿರುವ ಹಳ್ಳಿಯವಳು. ಆಕೆ ಜೀವನದಲ್ಲೇ ಅತ್ಯಂತ ಯಾತನಾದಾಯಕ ಸಮಯ ಕಳೆಯುತ್ತಿದ್ದಾಳೆ. ತನ್ನ ವಾರಿಗೆಯವರ ಜತೆಗೆ ಆಟ ಆಡಿಕೊಂಡು ಕಾಲ ಕಳೆಯಬೇಕಾದ ಈಕೆಗೆ ಊಹಿಸಲೂ ಸಾಧ್ಯವಾಗದಂಥ ನೋವು ನೀಡುತ್ತಿದೆ ಕಾಯಿಲೆ. ಆಕೆಗೆ ಚರ್ಮದ ಮೇಲೆ ವಿಪರೀತ ಎನಿಸುವಷ್ಟು ಹಿಂಸೆ. ಕೆರೆತದಂತೆ ಅನಿಸಿ, ಅದರಿಂದಲೇ ಗಾಯಗಳಾಗಿವೆ. ವೈರಲ್ ಇನ್ ಫೆಕ್ಷನ್ ಆದಾಗ ಇಡೀ ದೇಹವೆಲ್ಲ ನೋವು ಉಂಟಾಗುತ್ತದಲ್ಲಾ ಅಂಥ ನೋವು. ಕೆರೆತ ನಿಲ್ಲುವುದೇ ಇಲ್ಲ. ಅದರಿಂದ ಏಟಿನಂತಾಗಿವೆ. ಆಕೆ ಮೂಗಿನಿಂದ ರಕ್ತ ಬರುತ್ತದೆ. ಆಗಾಗ ರಕ್ತ ವಾಂತಿ ಮಾಡಿಕೊಳ್ಳುತ್ತಾಳೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!