By: Oneindia Kannada Video Team
Published : November 21, 2017, 05:44

ಮಂತ್ರಾಲಯದ ಗುರುರಾಯರ ಸನ್ನಿಧಾನದಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್

Subscribe to Oneindia Kannada

ಮಂತ್ರಾಲಯ ಗುರುರಾಯರ ಅನುಗ್ರಹ ಬೇಡಿದ ರಜನಿಕಾಂತ್. ರಾಯಚೂರು ಸಮೀಪದ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಗುರುರಾಯರ ಅನುಗ್ರಹ ಬೇಡಿದರು.ಆಂಧ್ರಪ್ರದೇಶದ ಕರ್ನೂರು ಜಿಲ್ಲೆಯ ವಿಶ್ವವಿಖ್ಯಾತ ಪುಣ್ಯಕ್ಷೇತ್ರ ಮಂತ್ರಾಲಯ ಗ್ರಾಮಕ್ಕೆ ರಜನಿಕಾಂತ್ ಅವರು ಮಂಗಳವಾರ ಬೆಳಗ್ಗೆ ಭೇಟಿ ನೀಡಿದರು.ಬೆಳಿಗ್ಗೆ 7.30ಕ್ಕೆ ಮಂತ್ರಾಲಯಕ್ಕೆ ಬಂದ ರಜನಿಕಾಂತ್, ನೇರವಾಗಿ ಮಂತ್ರಾಲಯದ ಮಂಚಾಲಮ್ಮ ದೇವಿಯ ದರ್ಶನ ಪಡೆದರು. ನಂತರ ರಾಘವೇಂದ್ರ ಸ್ವಾಮಿ, ಆಂಜನೇಯ ಸ್ವಾಮಿ ದರ್ಶನ ಪಡೆದರು. ರಾಯರ ಸನ್ನಿಧಿಯಲ್ಲಿ ಕೆಲ ಹೊತ್ತು ಧ್ಯಾನ ಮಾಡಿದರು.ಹತ್ತು ನಿಮಿಷಗಳ ಕಾಲ ಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥರ ಜತೆ ಮಾತುಕತೆ ನಡೆಸಿ, ಪ್ರಸಾದ ಸ್ವೀಕರಿಸಿ ತೆರಳಿದರು.ಈ ಹಿಂದೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ 10 ಕೋಟಿ ರೂಪಾಯಿಗಳನ್ನು ದಾನವಾಗಿ ನೀಡಿದ್ದಾರೆ. ಈ ಹಣವನ್ನು ಮಠದ ಅಭಿವೃದ್ಧಿ ಕಾರ್ಯಗಳಿಗೆ ಸದ್ವಿನಿಯೋಗ ಮಾಡಿಕೊಳ್ಳಲಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!