By: Oneindia Kannada Video Team
Published : January 03, 2018, 03:37

ಬಿಜಾಪುರದಲ್ಲಿ ಸುದೀಪ್ ಫೋಟೋ ಹೆಸರು ಬಳಸಿ ಕಿಡಿಗೇಡಿ ಕೆಲಸ

Subscribe to Oneindia Kannada

ಚಿತ್ರ ನಟ ಸುದೀಪ್ ಅವರು ವಿಜಯಪುರ ಜಿಲ್ಲೆ ಮುದ್ದೆಬಿಹಾಳ ತಾಲ್ಲೂಕಿನ ನಾಲತವಾಡ ಉಪ ತಹಿಶೀಲ್ದಾರ್ ಕಚೇರಿಗೆ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ!! ಗಾಬರಿಯಾಗಬೇಡಿ, ಯಾರೊ ಕಿಡಿಗೇಡಿಗಳು ಸುದೀಪ್ ಚಿತ್ರ ಬಳಸಿ ಜಾತಿ ಪ್ರಮಾಣ ಪತ್ರಕ್ಕೆ ಆನ್‌ಲೈನ್ ಅರ್ಜಿ ಹಾಕಿದ್ದಾರೆ ಅಷ್ಟೆ. ಸುದೀಪ್ ಭಾವ ಚಿತ್ರವಿರುವ ಅರ್ಜಿ ನೋಡಿ ಉಪತಹಶೀಲ್ದಾರ್ ಬಸವರಾಜ ಭದ್ರಣ್ಣನವರ್ ಅವರು ದಂಗಾಗಿದ್ದಾರೆ.ಯಾರೊ ಕಿಡಿಗೇಡಿಗಳು ಸಿದ್ದಲಿಂಗಪ್ಪ ಕೊಳೂರ ಹೆಸರಿನಲ್ಲಿ ಸುದೀಪ್ ಭಾವಚಿತ್ರ ಬಳಸಿ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಹಾಕಿದ್ದಾರೆ, ಸ್ಥಳೀಯ ಖಾಸಗಿ ಸೈಬರ್ ಕೇಂದ್ರದಿಂದ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ಉಪತಹಶೀಲ್ದಾರ್ ಅವರು ತಿರಸ್ಕಿರಿಸಿದ್ದಾರೆ.ಇನ್ನು ಆ ಕಿಡಿಗೇಡಿ ಯಾರು ಯಾಕೆ ಹೀಗೆ ಮಾಡಿದ್ದಾರೆ ಯಾವುದೇ ಮಾಹಿತಿ ಇಲ್ಲ. ತನಿಖೆ ನಡೆದ ನಂತರ ಆ ಕಿಡಿಗೇಡಿ ಬಗ್ಗೆ ಮಾಹಿತಿ ಸಿಗುತ್ತೆ. ಇದರ ಬಗ್ಗೆ ನಟ ಸುದೀಪ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕಿದೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!