By : Oneindia Kannada Video Team
Published : March 01, 2018, 12:51

ಶ್ರೀದೇವಿಯ ಅಕಾಲ ನಿಧನ : 5 ಸ್ಟಾರ್ ಹೋಟೆಲ್ ಗಳಲ್ಲಿ ಬಾತ್ ಟಬ್ ತೆಗೆದುಹಾಕಲು ನಿರ್ಧಾರ

ಜುಮೈರಾ ಎಮಿರೇಟ್ಸ್ ಟವರ್ಸ್ ಹೋಟೆಲಿನಲ್ಲಿ ಉಳಿದುಕೊಂಡಿದ್ದ 54 ವರ್ಷದ ಶ್ರೀದೇವಿಗೆ 62 ವರ್ಷದ ಗಂಡ ಬೋನಿ ಕಪೂರ್ ಅವರು ಸದ್ದಿಲ್ಲದೆ ಮುಂಬೈನಿಂದ ತಮಗಾಗಿ ವಾಪಸ್ ಬಂದಿದ್ದು ಭಾರೀ ಖುಷಿಯನ್ನು ತಂದಿತ್ತು. ಸ್ಥಳೀಯ ಕಾಲಮಾನ ಸಂಜೆ 5.30ರ ಸುಮಾರಿಗೆ, ತಯಾರಾಗಿ ಬರುತ್ತೇನೆಂದು ಶ್ರೀದೇವಿಯವರು ಬಾತ್ ರೂಮಿಗೆ ತೆರಳಿದ್ದಾರೆ. ಆದರೆ, ಎಷ್ಟು ಹೊತ್ತಾದರೂ ಶ್ರೀದೇವಿಯವರು ಬಚ್ಚಲುಮನೆಯಿಂದ ಮರಳಿಲ್ಲ. ಅನುಮಾನಗೊಂಡ ಬೋನಿ, ಬಲವಂತವಾಗಿ ಬಾಗಿಲು ತೆರೆದಾಗ ಊಹಿಸದಂಥ ದೃಶ್ಯ ಅವರ ಕಣ್ಣಿಗೆ ಬಿದ್ದಿದೆ. ಶ್ರೀದೇವಿಯವರು ನಿಶ್ಚಲರಾಗಿ ಪೂರ್ತಿಯಾಗಿ ನೀರು ತುಂಬಿದ್ದ ಬಾತ್ ಟಬ್ ನಲ್ಲಿ ಬಿದ್ದಿದ್ದರು. ಇದನ್ನು ನೋಡುತ್ತಿದ್ದಂತೆ ಬೋನಿ ಕಪೂರ್ ಅವರು ಕಂಗಾಲಾಗಿದ್ದಾರೆ. ಆದರೆ, ಆಸ್ಪತ್ರೆಗೆ ಕರೆದುಕೊಂಡು ಹೋಗುವ ಹೊತ್ತಿಗೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.ಹೀಗಾಗಿ 5 ಸ್ಟಾರ್ ಹೋಟೆಲ್ ಗಳು ಬಾತ್ ಟಬ್ ನ ತೆಗೆದುಹಾಕಲು ಒಂದು ಮಹತ್ವವಾದ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!