By : Oneindia Kannada Video Team
Published : March 01, 2018, 02:27

ಶ್ರೀದೇವಿ ನಿಧನದ ನಂತರ ತಮ್ಮ ಪತಿ ಬೋನಿ ಕಪೂರ್ ರಿಂದ ಹೆಂಡತಿಗೆ ಪ್ರೀತಿಯ ಪತ್ರ

ಶ್ರೀದೇವಿಯನ್ನು ಅವರ ಗಂಡ ಬೋನಿ ಕಪೂರ್ ಎಷ್ಟೊಂದು ಪ್ರೀತಿಸುತ್ತಿದ್ದರೆಂದರೆ, ಕ್ಷಣವೂ ಅವರನ್ನು ಬಿಟ್ಟು ಇರುತ್ತಿರಲಿಲ್ಲ. ಸಂಬಂಧಿಯ ಮದುವೆಯ ನಂತರ ದುಬೈನಲ್ಲಿಯೇ ಶಾಪಿಂಗ್ ಮಾಡಲೆಂದು ಉಳಿದುಕೊಂಡಿದ್ದ ಶ್ರೀದೇವಿಗೆ ಸರ್ಪ್ರೈಸ್ ನೀಡಲೆಂದೇ ಬೋನಿ ಅವರು ದುಬೈಗೆ ಭಾರತದಿಂದ ಮರಳಿದ್ದರು. ಜುಮೈರಾ ಎಮಿರೇಟ್ಸ್ ಟವರ್ಸ್ ಹೋಟೆಲಿನಲ್ಲಿ ಉಳಿದುಕೊಂಡಿದ್ದ 54 ವರ್ಷದ ಶ್ರೀದೇವಿಗೆ 62 ವರ್ಷದ ಗಂಡ ಬೋನಿ ಕಪೂರ್ ಅವರು ಸದ್ದಿಲ್ಲದೆ ಮುಂಬೈನಿಂದ ತಮಗಾಗಿ ವಾಪಸ್ ಬಂದಿದ್ದು ಭಾರೀ ಖುಷಿಯನ್ನು ತಂದಿತ್ತು. ಇಬ್ಬರೂ ಒಟ್ಟಿಗೆ ರಾತ್ರಿಯೂಟ ಮಾಡೋಣವೆಂದು ಬೋನಿ ಅವರು ಶ್ರೀದೇವಿಗೆ ತಿಳಿಸಿದ್ದಾರೆ. ಅಷ್ಟ್ರಲ್ಲಿ ಆಗಬಾರದ ಘಟನೆ ನಡೆದುಹೋಗುತ್ತೆ. ಶ್ರೀದೇವಿ ಹಠಾತ್ ನಿಧನ ಹೊಂದುತ್ತಾರೆ. ಇದರಿಂದ ಪತಿ ಬೋನಿ ಕಪೂರ್ ಗೆ ಆಘಾತವಾದರೂ ಹೆಂಡತಿಯ ಅಂತ್ಯಕ್ರಿಯೆ ನಡೆಸಿ ನಂತರ ಟ್ವಿಟ್ಟರ್ ನಲ್ಲಿ ಹೆಂಡತಿಗಾಗಿ ಪ್ರೀತಿಯ ಪತ್ರವೊಂದನ್ನ ಬರೆದಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!