By : Oneindia Kannada Video Team
Published : March 01, 2018, 12:21

ಶ್ರೀದೇವಿಯ ಪಾರ್ಥಿವ ಶರೀರ ಮುಂಬೈಗೆ ಬರಲು ಈ ಭಾರತೀಯನ ಸಹಾಯವೇ ಕಾರಣ

ಎವರ್ ಗ್ರೀನ್ ನಟಿ ಶ್ರೀದೇವಿ ಫೆಬ್ರವರಿ 24 ರಂದು ದುಬೈನಲ್ಲಿ ಸಾವಿಗೀಡಾದರು. ಆದ್ರೆ, ಅವರ ಅಂತಿಮ ಸಂಸ್ಕಾರವನ್ನ ಇಂದು ಮಾಡಲಾಗಿದೆ. ಅದಕ್ಕೆ ಕಾರಣ ದುಬೈನಲ್ಲಿ ಎದುರಾದ ಸಮಸ್ಯೆಗಳು. ದುಬೈ ಹೋಟೆಲ್ ನ ಬಾತ್ ಟಬ್ ನಲ್ಲಿ ಶ್ರೀದೇವಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. ಇದು ಕೊಲೆಯೋ ಅಥವಾ ಆಕಸ್ಮಿಕ ಸಾವೋ ಎಂಬ ಶಂಕೆಯಲ್ಲಿ ದುಬೈ ಪೊಲೀಸರು ತನಿಖೆ ಕೈಗೊಂಡರು. ಇದರ ಮಧ್ಯೆ ಶ್ರೀದೇವಿ ಅವರ ಪಾರ್ಥಿವ ಶರೀರ ಇಂದು ಬರುತ್ತೆ, ನಾಳೆ ಬರುತ್ತೆ ಎಂದು ಭಾರತೀಯರು ಕಾದು ಕುಂತಿದ್ದರು. ಆದ್ರೆ, ದಿನಗಳು ಕಳೆಯಿತಾದರೂ ಪಾರ್ಥಿವ ಶರೀರ ಮಾತ್ರ ಬರಲಿಲ್ಲ. ಆಗ ಬೋನಿ ಕಪೂರ್ ಗೆ ನೆರವಾಗಿದ್ದು ಭಾರತ ಮೂಲದ ವ್ಯಕ್ತಿ. ದುಬೈ ಸರ್ಕಾರದ ನಿಯಮಗಳನ್ನ ಪೂರ್ಣಗೊಳಿಸಲು ಕಪೂರ್ ಕುಟುಂಬಕ್ಕೆ ನೆರವಾಗಿ, ಶ್ರೀದೇವಿ ಪಾರ್ಥಿವ ಶರೀರವನ್ನ ತಾಯ್ನಾಡಿಗೆ ತರಲು ಸಹಾಯ ಮಾಡಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!