By: Oneindia Kannada Video Team
Published : December 12, 2017, 10:35

ಗುಜರಾತ್ ನ್ಯಾಯಮೂರ್ತಿ ಸಾವಿನ ಹಿಂದೆ ಅಮಿತ್ ಷಾ ಕೈವಾಡ

Subscribe to Oneindia Kannada

ಧಾರವಾಡ, ಡಿಸೆಂಬರ್ 12: ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್. ಆರ್. ಹಿರೇಮಠ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ . ನ್ಯಾಯಮೂರ್ತಿ ಹರ್ಕಿಶನ್ ಲೋಯಾ ಸಂಶಯಾಸ್ಪದ ಸಾವಿನ ಹಿಂದೆ ಅಮಿತ್ ಷಾ ಕೈವಾಡವಿರುವ ಅನುಮಾನವಿದೆ ಎಂದು ಅವರು ತಿಳಿಸಿದ್ದಾರೆ.ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಸೊಹ್ರಾಬುದ್ದೀನ್ ಶೇಖ್ ಎನ್ಕೌಂಟರ್ಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಜಸ್ಟೀನ್ ಲೋಯಾ ಅವರ ಮುಂದಿತ್ತು. ಅಲ್ಲದೆ ಅವರು ನಿಷ್ಪಕ್ಷಪಾತವಾಗಿ ಅರ್ಜಿ ವಿಚಾರಣೆ ನಡೆಸುತ್ತಿದ್ದರು," ಎಂದು ಹೇಳಿದ್ದಾರೆ."ಸೊಹ್ರಾಬುದ್ದೀನ್ ಎನ್ಕೌಂಟರ್ ಆದಾಗ ಅಮಿತ್ ಷಾ ಅವರೇ ಗುಜರಾತ್ ಗೃಹ ಮಂತ್ರಿಯಾಗಿದ್ದರು. ಹೀಗಾಗಿ ಅಮಿತ್ ಷಾ ಅವರ ಮೇಲೆ ಸಂಶಯಗಳು ಬರುತ್ತಿವೆ. ಲೋಯಾ ನಿಗೂಢ ಸಾವಿನ ಕುರಿತು ಸ್ವತಂತ್ರವಾದ ಮರು ತನಿಖೆಯಾಗಬೇಕು," ಎಂದು ಹಿರೇಮಠ್ ಆಗ್ರಹಿಸಿದ್ದಾರೆ ,ಇನ್ನು ಇದೇ ವೇಳೆ ಮಾತನಾಡಿದ ಅವರು, "ಬಳ್ಳಾರಿಯ ಸಂಡೂರ ತಾಲೂಕಿನ ಕುಮಾರಸ್ವಾಮಿ ದೇವಸ್ಥಾನದ ಹತ್ತಿರ ಗಣಿಗಾರಿಕೆಗೆ ಅನುಮತಿ ಕೊಟ್ಟಿರೋದು ತಪ್ಪು . ಅದೊಂದು ಅಪರೂಪದ ದೇವಾಲಯ. ಹೀಗಾಗಿ ಈ ಕೂಡಲೇ ಸರ್ಕಾರ ಇಲ್ಲಿ ಗಣಿಗಾರಿಕೆ ನಡೆಸಲು ಕೊಟ್ಟಿರುವ ಅನುಮತಿ ವಾಪಸ್ ಪಡೆಯಬೇಕು," ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!