By: Oneindia Kannada Video Team
Published : December 16, 2017, 05:44

ಸೋನಿಯಾ ಗಾಂಧಿಯವರಿಂದ ಪರಿಚಯವಾದ ರಾಜಕೀಯ ನಿವೃತ್ತಿ

Subscribe to Oneindia Kannada

ರಾಜಕೀಯ ನಿವೃತ್ತಿ' ಎಂಬ ಪದವೇ ನಮಗೆ, ಅಂದರೆ ಭಾರತೀಯರಿಗೆ ತೀರಾ ಹೊಸದು. ನೆನಪಿನ ಶಕ್ತಿಯೇ ಕುಂದು ಹೋಗಿ, ಸ್ವಂತ ಬಲದಿಂದ ಸಹಿಯನ್ನೂ ಮಾಡಲಾಗದ ರಾಜಕಾರಣಿಗಳು 'ಮುತ್ಸದ್ಧಿ' ಎಂಬ ಕೋಟಾದಡಿ ಚಲಾವಣೆಯಲ್ಲಿರುತ್ತಾರೆ. ಆದರೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನಿವೃತ್ತಿ ಎಂಬ ಪದವನ್ನಾದರೂ ಬಳಸಿದ್ದಾರೆ. ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದರೆ ನಾನಿನ್ನು ನಿವೃತ್ತಿ ಆಗಬಹುದು ಎಂಬ ಮಾತನ್ನಾದರೂ ಆಡಿದ್ದಾರೆ. ಭಾರತದ ರಾಜಕೀಯ ಅವರ ಮೇಲೆ ಪ್ರಭಾವ ಬೀರಿಲ್ಲ ಎಂಬುದರ ಸೂಚನೆ ಕೂಡ ಇದಾಗಿರಬಹುದು. ಇಲ್ಲದಿದ್ದರೆ ರಾಜಕಾರಣ ಅಂದರೆ ಅಲ್ಲಿ ನಿವೃತ್ತಿ ಎಂಬುದಕ್ಕೆ ಮಾನ್ಯತೆಯೂ ಇಲ್ಲ, ಘನತೆಯೂ ಇಲ್ಲ ಎಂಬ ಸಂಗತಿಯನ್ನು ನಿರ್ಲಕ್ಷಿಸುತ್ತಿರಲಿಲ್ಲವೇನೋ.ಹೊಸ ತಲೆಮಾರಿನ ರಾಜಕಾರಣಿಗಳು ವಿದ್ಯಾಭ್ಯಾಸದ ಬಗ್ಗೆ ಮಾತನಾಡುತ್ತಿದ್ದಾರೆ, ನಿವೃತ್ತಿ ಇರಬೇಕು ಎಂಬ ಬಗ್ಗೆ ಧ್ವನಿ ಎತ್ತಿದ್ದಾರೆ. ಒಂದಿಷ್ಟು ಸಂಸ್ಕಾರ, ಸಭ್ಯ ಎನಿಸುವ ಭಾಷೆ, ಹೇಳಿದ ಮಾತಿಗೆ ಅಂಟಿಕೊಳ್ಳುವ ಘನತೆ ಬಗ್ಗೆ ಈಗಲೂ ಗಟ್ಟಿಯಾದ ಧ್ವನಿ ಎತ್ತಿಲ್ಲ ಅನ್ನೋ ಮಾತು ಬಿಡಿ. ಆದರೆ ಸೋನಿಯಾ ಗಾಂಧಿಯವರು ನಿವೃತ್ತಿ ಘೋಷಿಸುವ ಮೂಲಕ ಖಂಡಿತಾ 'ಮಾದರಿ' ಆಗಬೇಕು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!