By : Oneindia Kannada Video Team
Published : December 19, 2017, 03:03

ಸ್ಮ್ರಿತಿ ಇರಾನಿಗೆ ಗುಜರಾತ್ ನ್ ಮುಂದಿನ ಸಿ ಎಂ ಪಟ್ಟ

ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಪ್ರಯಾಸದ ಗೆಲುವು ಪಡೆದಿರುವ ಬಿಜೆಪಿಗೆ ಈಗ ಮುಖ್ಯಮಂತ್ರಿ ಆಯ್ಕೆಯ ಚಿಂತೆ ಶುರುವಾಗಿದೆ.ಕಾಂಗ್ರೆಸ್ ಒಡ್ಡಿದ ಸವಾಲನ್ನು ಕಷ್ಟಪಟ್ಟೇ ನೀಗಿಸಿರುವ ಬಿಜೆಪಿಗೆ, ಮೋದಿ ಅವರ ಕೊನೆಯ ಹತ್ತು ದಿನದ ಪ್ರಚಾರ ಕಾರ್ಯ ಚುನಾವಣೆ ಗೆಲ್ಲಲು ಎಷ್ಟು ದೊಡ್ಡ ಸಹಾಯ ಮಾಡಿದೆ ಎಂಬ ಅರಿವಿದೆ, ಹಾಗಾಗಿ ಈ ಬಾರಿ ಬಿಜೆಪಿ ಸ್ವಂತ 'ಕರಿಷ್ಮಾ' ಹೊಂದಿರುವ, ಉತ್ತಮ ನಾಯಕತ್ವ ಗುಣಗುಳ್ಳ, ಈಗಾಗಲೇ ಜನಪ್ರಿಯತೆಯ ಪ್ರಭೆ ಹೊಂದಿರುವ ವ್ಯಕ್ತಿಯನ್ನು ಸಿಎಂ ಕುರ್ಚಿಯ ಮೇಲೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಹಾಗಾಗಿ ಅವರ ಮೊದಲ ಆಯ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಎನ್ನಲಾಗಿದೆ.ಗುಜರಾತ್ ಮುಖ್ಯಮಂತ್ರಿ ಸಂಭಾವ್ಯರ ಪಟ್ಟಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಹೆಸರು ಮೊದಲಿನಲ್ಲಿದೆ. ಗಟ್ಟಿ ನಾಯಕತ್ವ ಗುಣಗುಳ್ಳುಳ್ಳ, ಅತ್ಯುತ್ತಮವಾದ ಸಂವಹನ ಕೌಶಲ್ಯ ಉಳ್ಳ ಸ್ಮೃತಿ ಇರಾನಿ ಅವರಿಗೆ ಪಟ್ಟ ಕಟ್ಟಿದರೆ ಗುಜರಾತ್‌ಗೆ ಸ್ವತಂತ್ರ ನಾಯಕ ಸಿಕ್ಕಂತಾಗುತ್ತದೆ, ಚುನಾವಣಾ ಸಮಯದಲ್ಲಿ ಮೋದಿ ಅವರ ಕೆಲಸ ಸುಗಮವಾಗುತ್ತದೆ ಎಂದು ಬಿಜೆಪಿ ಲೆಕ್ಕಾಚಾರ ಹಾಕಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!