By : Oneindia Kannada Video Team
Published : March 16, 2018, 06:16

ಧೂಮಪಾನದಿಂದ ಕಿವಿ ನೋವು ಹಾಗು ಚರ್ಮದ ಸಮಸ್ಯೆ ಕಾಡುತ್ತೆ ಎಚ್ಚರ!

ಕೀಟನಾಶಕದಲ್ಲಿ ಬಳಸಲಾಗುವ ವಿಷಾಕಾರಕ ನಿಕೋಟಿನ್, ಜರ್ಮನಿಯಲ್ಲಿ ಹಿಂದೆ ಮನುಷ್ಯರನ್ನು ಕೊಲ್ಲಲು ಬಳಸಲಾಗುತ್ತಿದ್ದ ಹೈಡ್ರೋಜನ್ ಸೈನೈಡ್, ಇಲಿ ಪಾಶಾಣದಲ್ಲಿ ಉಪಯೋಗಿಸಲಾಗುವ ಅರ್ಸೆನಿಕ್, ಬ್ಯಾಟರಿ ತಯಾರಿಕೆಯಲ್ಲಿ ಬಳಸಲಾಗುವ ಕ್ಯಾಡ್ಮಿಯಂ... ಇವು ಮೂರು ಇಂಚು ಉದ್ದದ ಸಿಗರೇಟಿನಲ್ಲಿ ಇರುವ ಹಾನಿಕಾರಕ ಪದಾರ್ಥಗಳಲ್ಲಿ ಇರುವ ಡೆಡ್ಲಿ ಕಿಲ್ಲರ್ಸ್.ಸಿಗರೇಟಿನಲ್ಲಿ ಹುದುಗಿರುವ ಶೇಕಡಾ 70ರಷ್ಟು ರಾಸಾಯನಿಕಗಳು ಕ್ಯಾನ್ಸರ್ ರೋಗವನ್ನು ಬಳುವಳಿಯಾಗಿ ನೀಡುತ್ತವೆ. ಸಿಗರೇಟಿನ ಒಂದೊಂದು ಜುರುಕಿಯೂ ಸಾವಿನತ್ತ ವೇಗವಾಗಿ ನಮ್ಮನ್ನು ತಳ್ಳುತ್ತದೆ. ಇನ್ನೂ ಸಿಗರೇಟ್ ಸೇದಿದ್ರೆ ಕಿವಿ ನೋವು ಬರೋದು ಪಕ್ಕಾ ಜೊತೆಗೆ ಚರ್ಮದ ಸಮಸ್ಯೆ ಕೂಡ ಕಾಡುತ್ತೆ ಎಚ್ಚರ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!