By : Oneindia Kannada Video Team
Published : February 20, 2018, 02:36

ನರೇಂದ್ರ ಮೋದಿ ಮೇಲೆ ಹರಿಹಾಯ್ದ ಸಿದ್ದರಾಮಯ್ಯ

ಇಲ್ಲಿ ನಡೆದ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಸಿದ್ದರಾಮಯ್ಯ ಅವರ ಸರ್ಕಾರವನ್ನು ಕಮಿಷನ್ ಸರ್ಕಾರ ಎಂದು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಸಿದ್ದರಾಮಯ್ಯ ಅವರು ಕಾರ್ಟೂನ್ ವೊಂದನ್ನು ಟ್ವೀಟ್ ಮಾಡುವ ಮೂಲಕ ಉತ್ತರಿಸಿದ್ದಾರೆ. 'ಕಳೆದ ಬಾರಿ ಬೆಂಗಳೂರಿಗೆ ಬಂದಾಗ ಇಲ್ಲಿ 10 ಪರ್ಸೆಂಟ್ ಸರ್ಕಾರ ಇದೆ ಎಂದು ಹೇಳಿದ್ದೆ. ಆನಂತರ ನನಗೆ ಸಾಕಷ್ಟು ಜನ ಕರೆ ಮಾಡಿ, ಎಸ್​ಎಂಎಸ್ ಮೂಲಕ, ನೇರವಾಗಿ ಸಿಕ್ಕಾಗ 'ನಿಮ್ಮ ಮಾಹಿತಿ ಸರಿಯಿಲ್ಲ. ಶೇ.10 ಕಮಿಷನ್ ವ್ಯವಹಾರ ನಡೆಯುತ್ತಿಲ್ಲ, ಅದಕ್ಕಿಂತಲೂ ಹೆಚ್ಚು ಭ್ರಷ್ಟಾಚಾರವಿದೆ' ಎಂದು ಹೇಳಿದ್ದಾರೆ. ನಿಮಗೆ ಕಮಿಷನ್ ಸರ್ಕಾರ ಬೇಕೊ, ಮಿಷನ್ ಸರ್ಕಾರ ಬೇಕೊ? ಬಿಜೆಪಿ ಜನರ ಎಲ್ಲ ಕಾರ್ಯವನ್ನೂ ಮಿಷನ್ ರೀತಿ ನಡೆಸುತ್ತದೆ. ಎಂದು ಮೋದಿ ಅವರು ತಮ್ಮ ಭಾಷಣದಲ್ಲಿ ಹೇಳಿದ್ದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!