By: Oneindia Kannada Video Team
Published : November 03, 2017, 03:35

ಟಿಪ್ಪು ಜಯಂತಿ ಆಚರಿಸಿಯೇ ಆಚರಿಸುತ್ತೇವೆ ಎಂದು ಟ್ವಿಟ್ಟರ್ ನಲ್ಲಿ ಹೇಳಿದ ಸಿದ್ದರಾಮಯ್ಯ

Subscribe to Oneindia Kannada

ಯಾರು ಎಷ್ಟೇ ವಿರೋಧಿಸಿದರೂ ಟಿಪ್ಪು ಜಯಂತಿಯನ್ನು ಆಚರಿಸದೆ ಬಿಡುವುದಿಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಛರಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನವೆಂಬರ್ 10 ರಂದು ಆಚರಿಸಲು ನಿರ್ಧರಿಸಿರುವ ಟಿಪ್ಪು ಜಯಂತಿಯ ಕುರಿತು ರಾಜ್ಯದಾದ್ಯಂತ ಪರವಿರೋಧ ಚರ್ಚೆಯಾಗುತ್ತಿದೆ. ಬಿಜೆಪಿ ನಾಯಕರು, ದೇಶದ್ರೋಹಿ ಟಿಪ್ಪು ಜಯಂತಿ ಆಚರಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರೆ, ಕಾಂಗ್ರೆಸ್ಸಿಗರು, ದೇಶಪ್ರೇಮಿ ಟಿಪ್ಪು ಜಯಂತಿಯನ್ನು ಆಚರಿಸದೆ ಬಿಡುವುದಿಲ್ಲ ಎನ್ನುತ್ತಿದ್ದಾರೆ. ಉಭಯ ಪಕ್ಷಗಳ ಈ ಹಗ್ಗಜಗ್ಗಾಟಕ್ಕೆ ಕರ್ನಾಟಕದ ಜನತೆ ಮೌನಸಾಕ್ಷಿಯಾಗಿದ್ದಾರೆ.ಈ ನಡುವೆ, "ರಾಜ್ಯೋತ್ಸವದಷ್ಟೇ ಅಭಿಮಾನದಿಂದ ಟಿಪ್ಪು ಸೇರಿದಂತೆ 26 ಮಹಾ ಪುರುಷರು ಹಾಗೂ ಮಹಾ ಮಾತೆಯರ ಜಯಂತಿಯನ್ನು ನಮ್ಮ ಸರ್ಕಾರ ಆಚರಿಸುತ್ತಿದೆ." ಎಂಬ ಸಿದ್ದರಾಮಯ್ಯ ಟ್ವೀಟ್ ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಅತ್ತ ಪರಿವರ್ತನಾ ಯಾತ್ರೆಯಲ್ಲಿ ನಿರತರಾಗಿರುವ ಬಿಜೆಪಿ ನಾಯಕರು ಟಿಪ್ಪು ಜಯಂತಿ ಆಚರಣೆಯ ಸರ್ಕಾರದ ನಿರ್ಧಾರ 'ಅಲ್ಪಸಂಖ್ಯಾತರ ಓಲೈಕೆಯ ನಾಟಕ' ಎಂದಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!