By: Oneindia Kannada Video Team
Published : December 13, 2017, 05:08

ಸಿದ್ದರಾಮಯ್ಯನವರ ನವ ಕರ್ನಾಟಕ ನಿರ್ಮಾಣಕ್ಕಾಗಿ ಪ್ರವಾಸ ಬೀದರ್ ನಿಂದ ಶುರು

Subscribe to Oneindia Kannada

ಮುಖ್ಯಮಂತ್ರಿ ಸಿದ್ದರಾಮಯ್ಯ 'ನವ ಕರ್ನಾಟಕ ನಿರ್ಮಾಣಕ್ಕಾಗಿ' ಹೆಸರಿನ ತಮ್ಮ ರಾಜ್ಯ ಪ್ರವಾಸವನ್ನು ಬೀದರ್ ನಿಂದ ಆರಂಭಿಸಿದ್ದಾರೆ. ಇಂದು ಬೀದರ್ ನ ಬಸವ ಕಲ್ಯಾಣದಲ್ಲಿ ಮಹಾರ‍್ಯಾಲಿ ಉದ್ದೇಶಿಸಿ ಮುಖ್ಯಮಂತ್ರಿಗಳು ಭಾಷಣ ಮಾಡಿದರು. 'ನವ ಕರ್ನಾಟಕ ನಿರ್ಮಾಣಕ್ಕಾಗಿ' ಒಂದು ತಿಂಗಳ ದೀರ್ಘ ರಾಜ್ಯ ಪ್ರವಾಸವಾಗಿದ್ದು ಬೀದರ್ ನಿಂದ ಆರಂಭಿಸಲಾಗಿದೆ. ಡಿಸೆಂಬರ್ 13, 2017ರಿಂದ ಜನವರಿ 13, 2018ರವರೆಗೆ ಈ ಪ್ರವಾಸ ನಡೆಯಲಿದ್ದು, ಬಸ್ಸಿನಲ್ಲಿ ಸಿದ್ದರಾಮಯ್ಯ ರಾಜ್ಯದಾದ್ಯಂತ ಪ್ರವಾಸ ಮಾಡಲಿದ್ದಾರೆ.
ಬೀದರ್ ನಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು ಕಳೆದ 4 ವರ್ಷಗಳಲ್ಲಿ ಬೀದರ್ ಅಭಿವೃದ್ಧಿಗೆ ತಮ್ಮ ಸರಕಾರ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ.ಬೀದರ್ ಅಭಿವೃದ್ಧಿಗೆ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಸಿದ್ದರಾಮಯ್ಯ ಮಾಡಿರುವ ಸರಣಿ ಟ್ವೀಟ್ ಗಳ ಮಾಹಿತಿ ಇಲ್ಲಿದೆ,ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವ ಕಲ್ಯಾಣ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!