By : Oneindia Kannada Video Team
Published : December 22, 2017, 11:28

ಸಿದ್ದರಾಮಯ್ಯ ಭಾಷಣದ ಹೈಲೈಟ್ಸ್ ಅನಂತ್ ಕುಮಾರ್ ಹೆಗಡೆ ಟಾರ್ಗೆಟ್

"ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಗ್ರಾ.ಪಂ ಸದಸ್ಯ ಆಗೋದಕ್ಕೂ ಲಾಯಕ್ಕಿಲ್ಲದ ವ್ಯಕ್ತಿ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾರೋಗೇರಿಯಲ್ಲಿ ಕಾಂಗ್ರೆಸ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, "ಕೇಂದ್ರದ ಸಚಿವರೊಬ್ಬರು ಕರಾವಳಿ ಪ್ರದೇಶಗಳಲ್ಲಿ ಬೆಂಕಿ ಹಚ್ಚಿದರು. ಈ ತಪರಾಕಿ ಸಾಕಾ ಇನ್ನೂ ಬೇಕಾ ಅಂತಾ ಕೇಳಿದರು. ಸಚಿವ ಅನಂತಕುಮಾರ ಹೆಗಡೆ ಗ್ರಾ.ಪಂ ಸದಸ್ಯ ಆಗೋದಕ್ಕೂ ಲಾಯಕ್ಕಿಲ್ಲದ ವ್ಯಕ್ತಿ. ಇಂತಹವರಿಂದ ದೇಶ ಉದ್ಧಾರವಾಗುತ್ತಾ?," ಎಂದು ಹರಿಹಾಯ್ದರು. ಇದಕ್ಕೂ ಮೊದಲುರಾಯಬಾಗದಲ್ಲಿ ಸಾಧನಾ ಸಮಾವೇಶದಲ್ಲಿ ಅವರು ಭಾಗವಹಿಸಿದರು. ಜತೆಗೆ 337.97 ಕೋಟಿಯ ಕಾಮಗಾರಿಗೂ ಚಾಲನೆಯನ್ನು ನೀಡಿದರು. ಮುಖ್ಯಮಂತ್ರಿಗಳಿಗೆ ಖಡ್ಗ ನೀಡುವುದರ ಮುಖಾಂತರ ಕಾರ್ಯಕ್ರಮಕ್ಕೆ ಸ್ವಾಗತ ಕೋರಲಾಯಿತು. ನಂತರ ಮಾತನಾಡಿದ ಅವರು, "ನಮ್ಮ ಕಾಂಗ್ರೆಸ್ ಸರಕಾರವು ಅಭಿವೃದ್ದಿಯತ್ತ ನಡೆಯುತ್ತಿದೆ. ಇಲ್ಲಿನ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿಲ್ಲ. ಆದರೂ ನಾನು ಎರಡು ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸವನ್ನು ಮಾಡಿದ್ದೇನೆ," ಎಂದು ಹೇಳಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!