By : Oneindia Kannada Video Team
Published : March 01, 2018, 12:21

ರಾಜಕೀಯದಲ್ಲಿ ಪ್ರಾಮಾಣಿಕತೆ ಬಗ್ಗೆ ಮಾತಾಡಿದ ಸಿದ್ದರಾಮಯ್ಯ

ರಾಜಕೀಯದಲ್ಲಿ ಯಾರೂ ಶತ್ರುಗಳಿಲ್ಲ, ಯಾರೂ ಮಿತ್ರರೂ ಅಲ್ಲ.. ರಾಜಕಾರಣ ನಿಂತ ನೀರಲ್ಲ ಎನ್ನುವ ಪದವನ್ನು ಅದ್ಯಾವ ಪುಣ್ಯಾತ್ಮ ಹೇಳಿದ್ದಾನೋ? ಯಾಕೆಂದರೆ, ಬೆಳಗ್ಗೆಯಿಂದ ಸಾಯಂಕಾಲದವರೆಗೆ ಬಿಜೆಪಿ, ಕಾಂಗ್ರೆ,ಸ್, ಜೆಡಿಎಸ್ ಎಂದು ಕಿತ್ತಾಡುವ ರಾಜಕಾರಣಿಗಳು, ರಾತ್ರಿ ಮಿತ್ರರಾಗುವ ಉದಾಹರಣೆಗಳು ಬೇಕಾದಷ್ಟಿವೆ.. ಆದರೆ, ಈ ರಾಜಕಾರಣಿಗಳ ಬೆಳಗ್ಗೆಯಿಂದ ಸಾಯಂಕಾಲದದ ವರೆಗಿನ ಏನು ವರಸೆಯಿದೆಯೋ, ಅದನ್ನು ನಂಬಿಕೊಂಡು 24X7 ಕಿತ್ತಾಡಿಕೊಳ್ಳುವವರು, ಅವರ ಹಿಂಬಾಲಕರು, ಅಭಿಮಾನಿಗಳು, ಜನಸಾಮಾನ್ಯರು. ನಮ್ಮೀ ರಾಜಕಾರಣವನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಿರುವ ಮಾತುಗಳು ಸತ್ಯಕ್ಕೆ ಹಿಡಿದ ಕನ್ನಡಿಯಂತಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!