By: Oneindia Kannada Video Team
Published : January 11, 2018, 04:38

ಸಿದ್ದರಾಮಯ್ಯ ಸೆಲ್ಫಿ ವಿವಾದ : ಟ್ವಿಟ್ಟಿಗರು ಬಿಜೆಪಿ ಅಮಿತ್ ಮಳವಿಯಾಗೆ ಛೀಮಾರಿ

Subscribe to Oneindia Kannada

ಬಿಜೆಪಿ ಐಟಿ ಸೆಲ್ ನ ಮುಖ್ಯಸ್ಥ ಅಮಿತ್‌ ಮಾಳವೀಯ ಮತ್ತೆ ಸುದ್ದಿಯಲ್ಲಿದ್ದಾರೆ. ಸಿದ್ದರಾಮಯ್ಯ ಅವರು ಮಹಿಳೆಯರ ಗುಂಪಿನ ಜತೆ ಸೆಲ್ಫಿ ತೆಗೆಸಿಕೊಳ್ಳುವ ವಿಡಿಯೋ ಟ್ವೀಟ್ ಮಾಡಿ ಕುಹಕವಾಡಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ಸಿಗರಲ್ಲದೆ, ಅನೇಕ ಕನ್ನಡಿಗರು ಕೂಡಾ ಛೀಮಾರಿ ಹಾಕಿದ್ದು, ಇಂಥ ಕೀಳು ಅಭಿರುಚಿ ಒಳ್ಳೆಯದಲ್ಲ ಎಂದಿದ್ದಾರೆ.ಬಿಜೆಪಿ ರಾಷ್ಟ್ರೀಯ ಘಟಕದ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಅವರು, 'ಸಿದ್ದರಾಮಯ್ಯ ಸಾರ್ವಜನಿಕವಾಗಿ ಮಹಿಳೆಯ ಮೈ ಮುಟ್ಟಬಹುದೇ? ಕೈ ತೆಗೆಯಿರಿ' ಎಂಬ ಸಂದೇಶದೊಂದಿಗೆ ವಿಡಿಯೋ ಟ್ವೀಟ್ ಮಾಡಿದ್ದು ಚರ್ಚೆಯಾಗುತ್ತಿದೆ.ಶಿವಮೊಗ್ಗದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಯುವತಿಯರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ವೇಳೆ ಸಿದ್ದರಾಮಯ್ಯ ಯುವತಿಯೊಬ್ಬರ ತೋಳು ಹಿಡಿದು ಹತ್ತಿರಕ್ಕೆ ಎಳೆದಿರುವ ವಿಡಿಯೊ ಅನ್ನು ಅಮಿತ್‌ ಮಾಳವೀಯ ಮಂಗಳವಾರ ಟ್ವೀಟ್‌ ಮಾಡಿದ್ದರು.'ಬಿಜೆಪಿ ಶಾಸಕರಾಗಿದ್ದವರು ಸದನದಲ್ಲಿ ಅಶ್ಲೀಲ ದೃಶ್ಯ ನೋಡಿದ್ದು ಸರಿಯೇ' ಎಂದು ಹಲವಾರು ಮಂದಿ ಪ್ರಶ್ನಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!