By : Oneindia Kannada Video Team
Published : December 09, 2017, 03:41

ಸುತ್ತೂರು ಶ್ರೀಗಳ ಸಮ್ಮುಖದಲ್ಲಿ ಪ್ರತಾಪ್ ಸಿಂಹಗೆ ಸಿದ್ದು ಬುದ್ಧಿಮಾತು

ಇತ್ತೀಚಿನ ಹಲವು ವಿದ್ಯಮಾನಗಳು ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಅದರಲ್ಲೂ ಹನುಮ ಜಯಂತಿ ಸಂಬಂಧ ಹುಣಸೂರಿನಲ್ಲಿ ನಡೆದ ಘಟನೆ, ಎರಡು ಪಕ್ಷಗಳ ನಡುವಿನ ಮಾತಿನ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿತ್ತು. ಶುಕ್ರವಾರ (ಡಿ 8) ಮೈಸೂರಿನ ವಿದ್ಯಾವರ್ಧಕ ಸಂಘದ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ ಭಾಗವಹಿಸಿದ್ದರು. ವೇದಿಕೆಗೆ ಬರುವ ಮುನ್ನ ಪ್ರತಾಪ್ ಮತ್ತು ಸಿಎಂ ಎದುರಾದಾಗ, ಪ್ರತಾಪ್ ಬೆನ್ನಿನ ಮೇಲೆ ಕೈಹಾಕಿ ಸಿಎಂ, ಬಾರಯ್ಯಾ.. ಎಂದು ಮಾತಿಗಿಳಿದರು.ವೇದಿಕೆಗೆ ಹೋಗುವ ಮುನ್ನ ಪ್ರತಾಪ್ ಸಿಂಹ ಅವರನ್ನು ನೋಡುತ್ತಲೇ, 'ಬಾರಯ್ಯಾ.. ಯಾಕೆ ವಿರಾಟ್ ಕೊಹ್ಲಿ ತರ, ಗಡ್ಡ ಮೀಸೆ ಬಿಟ್ಟಿದ್ದೀಯಾ' ಎಂದು ಮುಖ್ಯಮಂತ್ರಿಗಳು ಕಿಚಾಯಿಸಿದರು. ಇದಕ್ಕೆ ಪ್ರತಾಪ್ ಮುಗಳ್ನಗುತ್ತಾ, ಬನ್ನಿ ಸಾರ್ ಎಂದು ವೇದಿಕೆಗೆ ಕರೆದುಕೊಂಡು ಹೋದರು. ಇದಾದ ನಂತರ ವೇದಿಕೆಯಲ್ಲೂ ಮುಖ್ಯಮಂತ್ರಿಗಳು, ಸಂಸದ ಪ್ರತಾಪ್ ಸಿಂಹಗೆ ಬುದ್ಡಿಮಾತನ್ನು ಹೇಳಿದರು. ಸಿಎಂ ಮಾತನ್ನು ಸಂಸದ ಪ್ರತಾಪ್ ಸಿಂಹ, ವಿನಮ್ರತೆಯಿಂದ ಆಲಿಸುತ್ತಿದ್ದದ್ದು ವಿಶೇಷವಾಗಿತ್ತು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!