By : Oneindia Kannada Video Team
Published : November 11, 2017, 12:35

ಎಚ್ ಡಿ ಕುಮಾರಸ್ವಾಮಿಯವರ ಗ್ರಾಮವಾಸ್ತವ್ಯದ ಬಗ್ಗೆ ಟೀಕಿಸಿದ ಸಿದ್ದರಾಮಯ್ಯ

ಹೃದಯ ಶಸ್ತ್ರಚಿಕಿತ್ಸೆಗೊಳಗಾದ ಎಚ್ಡಿಕೆ ಬಗ್ಗೆ ಸಿಎಂ ಹೀಗಾ ಟೀಕೆ ಮಾಡೋದು! ಹೃದಯ ಶಸ್ತ್ರಚಿಕಿತ್ಸೆಗೊಳಗಾದ ನಂತರ ಸ್ವಲ್ಪದಿನ ವಿಶ್ರಾಂತಿ ತೆಗೆದುಕೊಂಡು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿಯವರ 'ವಿಕಾಸ ಯಾತ್ರೆ'ಯ ಮೊದಲ ಹಂತದ ಯಾತ್ರೆ, ಚಾಮುಂಡಿಯಿಂದ ಹರಿಹರದವರೆಗೆ ಕ್ರಮಿಸಿ ಮುಕ್ತಾಯಗೊಂಡಿದೆ. ಮೂರು ದಿನಗಳ ಯಾತ್ರೆಯಲ್ಲಿ ಎರಡು ದಿನ ಗ್ರಾಮವಾಸ್ತವ್ಯ ನಡೆಸಿದ ಕುಮಾರಸ್ವಾಮಿಯವರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಸಿಎಂ ಲೇವಡಿಗೆ ಜೆಡಿಎಸ್ ವರಿಷ್ಠ ದೇವೇಗೌಡ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.ಜೆಡಿಎಸ್ ವಿಕಾಸಯಾತ್ರೆಯನ್ನು ಲೇವಡಿ ಮಾಡುತ್ತಾ ಸಿದ್ದರಾಮಯ್ಯ, ಗ್ರಾಮವಾಸ್ತವ್ಯ ಮಾಡಲು ಕುಮಾರಸ್ವಾಮಿ ಬೆಂಗಳೂರಿನಿಂದ ದಿಂಬು, ಚಾಪೆ, ಕಮೋಡ್ ಹೊತ್ತುಕೊಂಡು ಹೋಗುತ್ತಾರೆಂದು ಸಿಎಂ ವ್ಯಂಗ್ಯವಾಡಿದ್ದಾರೆ.ಕುಮಾರಸ್ವಾಮಿಯವರಿಗೆ ಅನಾರೋಗ್ಯ ಇರುವುದನ್ನೂ ಅರಿತು, ಸಿಎಂ ನೀಡಿರುವ ಹೇಳಿಕೆಗೆ ದೇವೇಗೌಡರು ನೋವು ವ್ಯಕ್ತಪಡಿಸಿದರೆ, ಕುಮಾರಸ್ವಾಮಿ ರಾಜ್ಯದ ಜನತೆ ಇದನ್ನೆಲ್ಲಾ ನೋಡುತ್ತಿದ್ದಾರೆಂದು ಹೇಳಿ ಸುಮ್ಮನಾಗಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!